Temple Tour: ಶಿಲ್ಪಕಲೆಯಿಂದ ಗಮನ ಸೆಳೆಯುತ್ತಿದೆ ಐತಿಹಾಸಿಕ ದೇವಾಲಯ
ಬಸವಕಲ್ಯಾಣ ತಾಲೂಕಿನ ಉಮಾಪುರ- ಲಾಹೇಶ್ವರ ಇರುವ ನೀಲಕಂಠ, ಮಹಾದೇವ, ಪಾರ್ವತಿ, ಗಣಪತಿಯ ದೇವಸ್ಥಾನಗಳು ದೇವಾಲಯ ವಾಸ್ತು ಶೈಲಿಗೆ ಅತ್ಯುತ್ತಮ ನಿದರ್ಶನಗಳು.
ಭಾರತದಲ್ಲಿ ಹಿಂದೂ ದೇಗುಲಗಳಿಗೆ ಹೆಚ್ಚು ಮನ್ನಣೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ದೇಗುಲಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಸದಾ ಸಿದ್ಧವಿರುತ್ತದೆ. ಅದರಲ್ಲೂ ಇತಿಹಾಸ ಪ್ರಸಿದ್ಧ ದೇವಾಲಯ ಅಂದರೆ ಆ ಮಂದಿರವನ್ನ ಸರ್ಕಾರ ಜೋಪಾನ ಮಾಡುವ ಪರಿಪಾಠವಿದೆ. ಅದರೆ ಬೀದರ್ನ ಬಸವಕಲ್ಯಾಣದಲ್ಲಿರುವ ಉಮಾಮಹೇಶ್ವರಿ ದೇವಾಲಯ ಈ ಮಾತಿಗೆ ವಿರುದ್ಧವಾಗಿದೆ. ಶಿಲ್ಪಕಲೆಗೆ ಹೆಸರಾಗಿರುವ ಈ ದೇಗುಲ ಸರ್ಕಾರದ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಶಿಲ್ಪಕಲೆಗೆ ಉಮಾಮಹೇಶ್ವರಿ ದೇಗುಲ ಹೆಸರುವಾಸಿಯಾಗಿದ್ದು, ಐತಿಹಾಸಿಕ ಹಿನ್ನಲೆ ಇರುವ ಈ ದೇವಾಲಯ ನೆಪಮಾತ್ರಕ್ಕಷ್ಟೇ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಆರನೇಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಅನ್ನೋ ಪ್ರತೀತಿ ಇದಕ್ಕಿದೆ. ಬಸವಕಲ್ಯಾಣ ತಾಲೂಕಿನ ಉಮಾಪುರ- ಲಾಹೇಶ್ವರ ಇರುವ ನೀಲಕಂಠ, ಮಹಾದೇವ, ಪಾರ್ವತಿ, ಗಣಪತಿಯ ದೇವಸ್ಥಾನಗಳು ದೇವಾಲಯ ವಾಸ್ತು ಶೈಲಿಗೆ ಅತ್ಯುತ್ತಮ ನಿದರ್ಶನಗಳು. ಸಪ್ತ ರಥ ಮಾದರಿಯಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೂರು ಮುಖ ಮಂಟಪಗಳಿವೆ.
Latest Videos