30 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸ: ಸ್ವಂತ ಸೂರಿಗಾಗಿ DC ಕಾಲಿಗೆ ಬಿದ್ದು ಅಂಗಾಲಾಚಿದ ವೃದ್ದೆ
ಮನೆಗಾಗಿ ವೃದ್ದೆ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಕಣ್ಣೀರು ಹಾಕಿ ಅಂಗಲಾಚಿ ಬೇಡಿಕೊಂಡಿರುವ ಕರುಣಾಜಕ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಗಿಡದಾಗನಹಳ್ಳಿಯಲ್ಲಿ ನಡೆದಿದೆ.
ತುಮಕೂರು: ಮನೆಗಾಗಿ ವೃದ್ದೆ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಕಣ್ಣೀರು ಹಾಕಿ ಅಂಗಲಾಚಿ ಬೇಡಿಕೊಂಡಿರುವ ಕರುಣಾಜಕ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಗಿಡದಾಗನಹಳ್ಳಿಯಲ್ಲಿ ನಡೆದಿದೆ. ಗಿಡದಾಗನಹಳ್ಳಿ ಗ್ರಾಮದ ವೃದ್ದೆ ಸಾವಿತ್ರಮ್ಮ 30 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರು ಮನೆಗಾಗಿ 30 ವರ್ಷಗಳಿಂದ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಉಪಯೋಗವಾಗಿಲ್ಲ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿಮಿತ್ತ ಇಂದು (ನ.20) ತುಮಕೂರು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಗಿಡದಾಗನಹಳ್ಳಿ ಗ್ರಾಮಕ್ಕೆ ಆಗಮಿಸಿ ಮನೆ ಮನೆಗೂ ತೆರಳಿ ಸಮಸ್ಯೆಯನ್ನು ಆಲಿಸುತ್ತಿದ್ದರು. ಈ ವೇಳೆ ಸಾವಿತ್ರಮ್ಮ ಡಿ.ಸಿ ಕಾಲಿಗೆ ಬಿದ್ದು ಸೂರು ಕೊಡಿಸಿ ಎಂದು ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ.
ವೃದ್ದೆ ಸಾವಿತ್ರಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅದಷ್ಟು ಬೇಗ ಸೂರು ಕಲ್ಪಿಸುವ ಭರವಸೆ ನೀಡಿ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ನಂತರ ಮನವಿ ಪತ್ರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸ್ಥಳದಲ್ಲೇ ಹಸ್ತಾಂತರಿಸಿದ್ದಾರೆ.