ಫೇಕ್ ಪ್ರಚಾರ ಮಾಡಲ್ಲ, ಸಿನಿಮಾ ಬಗ್ಗೆ ಸುಳ್ಳು ಹೇಳಲ್ಲ: ಪ್ರಥಮ್

ಫೇಕ್ ಪ್ರಚಾರ ಮಾಡಲ್ಲ, ಸಿನಿಮಾ ಬಗ್ಗೆ ಸುಳ್ಳು ಹೇಳಲ್ಲ: ಪ್ರಥಮ್

ಮಂಜುನಾಥ ಸಿ.
|

Updated on: Feb 27, 2024 | 11:19 PM

Olle Hudga Pratham: ಒಳ್ಳೆ ಹುಡುಗ ಪ್ರಥಮ್ ನಟಿಸಿರುವ ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾದ ಸುಳ್ಳು ಪ್ರಚಾರವನ್ನು ತಾವು ಮಾಡುವುದಿಲ್ಲವೆಂದು ಪ್ರಥಮ್ ಹೇಳಿದ್ದಾರೆ.

ಒಳ್ಳೆ ಹುಡುಗ ಪ್ರಥಮ್ (Olle Hudga Pratham) ನಟನೆಯ ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಪ್ರಥಮ್, ‘ನಾವು ಸಿನಿಮಾದ ಸುಳ್ಳು ಪ್ರಚಾರ ಮಾಡಲ್ಲ. ನಮಗೆ ಅಷ್ಟು ವೀವ್ಸ್ ಬಂದಿದೆ, ಇಷ್ಟು ವೀವ್ಸ್ ಬಂದಿದೆ. ಕೆಲವೇ ಗಂಟೆಗಳಲ್ಲಿ ಇಷ್ಟು ಲೈಕ್ಸ್ ಬಂದಿದೆ ಎಂದೆಲ್ಲ ಹೇಳಲ್ಲ’ ಎಂದರು. ಇತ್ತೀಚೆಗೆ ಹೀಗೆ ಸುಳ್ಳು ಪ್ರಚಾರ ಮಾಡುವವರ ಸಂಖ್ಯೆ ಚಿತ್ರರಂಗದಲ್ಲಿ ಹೆಚ್ಚಾಗಿದೆ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮುಂತಾದ ಮಹನೀಯರು ಸತ್ಯದ ಹಾದಿಯಲ್ಲಿ ನಡೆದು ಚಿತ್ರರಂಗ ಕಟ್ಟಿದ್ದಾರೆ, ನಾವು ಸುಳ್ಳು ಹಾದಿ ಹಿಡಿಯುವುದಿಲ್ಲ. ಟೀಸರ್​ನ ಆರಂಭದಲ್ಲಿ ಸಹ ನಾವು ಈ ವಿಷಯವನ್ನು ಹೇಳಿದ್ದೇವೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ