ಯುದ್ದ ಶುರುವಾದ ಮೊದಲ ದಿನವೇ ವೈರಿಗೆ ಅತಿಹೆಚ್ಚು ಹಾನಿಯನ್ನುಂಟು ಮಾಡಬೇಕು: ಕರ್ನಲ್ ಪಿವಿ ಹರಿ (ನಿವೃತ್ತ)
ಯುದ್ಧದ ಸಮಯದಲ್ಲಿ ಬಳಸುವ ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಬಗ್ಗೆ ಕರ್ನಲ್ ಪಿವಿ ಹರಿ ಅವರು ವಿವರಣೆ ನೀಡಿದ್ದಾರೆ. ಡಿ ಡೇ ಅಂದರೆ ಒಂದು ನಿಗದಿತ ದಿನದಂದು ವಾಯಪಡೆ, ನೌಕಾದಳ ಮತ್ತು ಸೇನೆ ಒಟ್ಟಾಗಿ ವೈರಿಗಳ ಮೇಲೆ ಆಕ್ರಮಣ ಮಾಡುವುದು ಮತ್ತು ಇದನ್ನು ಗೌಪ್ಯವಾಗಿಟ್ಟುರುತ್ತಾರೆ. ಹೆಚ್ ಫ್ಯಾಕ್ಟರ್ ಅಂದರೆ ಹೋಟೆಲ್ ಅವರ್ ಅಥವಾ ಯುದ್ಧಕ್ಕೆ ನಿಗದಿಪಡಿಸಲಾದ ದಿನದಂದು ಆಕ್ರಮಣ ಮಾಡುವ ಟೈಮ್ ಎಂದು ಕರ್ನಲ್ ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 30: ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಸಂಭಾವ್ಯ ಯುದ್ಧದ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಭಾರತದ ಮಿಲಿಟರಿ ಪಡೆಗಳ ಮುಖ್ಯಸ್ಥರಿಗೆ ಫ್ರೀ ಹ್ಯಾಂಡ್ ನೀಡಿದ್ದಾರೆ. ಯುದ್ಧ ನಡೆದರೆ ಹೇಗಿರುತ್ತದೆ, ಯುದ್ಧ ಹೇಗೆ ಆರಂಭವಾಗುತ್ತದೆ, ಅಕ್ರಮಣ ಮಾಡುವ ಶೈಲಿ ಹೇಗಿರುತ್ತದೆ ಮೊದಲಾದ ಹಲವಾರು ವಿಚಾರಗಳನ್ನು ನಿವೃತ್ತ ಕರ್ನಲ್ ಪಿ ವಿ ಹರಿ ಟಿವಿ9ನೊಂದಿಗೆ ಹಂಚಿಕೊಂಡಿದ್ದಾರೆ. 1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಕರ್ನಲ್ ಹರಿ ಭಾಗಿಯಾಗಿದ್ದರು.
ಇದನ್ನೂ ಓದಿ: ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು, ಮೋದಿ ಜೊತೆ ನಾವಿದ್ದೇವೆ; ಎಂ.ಬಿ. ಪಾಟೀಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 30, 2025 02:32 PM