ತುಮಕೂರು: ಶ್ರಾವಣ ಮಾಸದ ಮೊದಲ ಶನಿವಾರವೇ ಪಾವಗಡದ ಶನೇಶ್ವರ ದೇವಾಲಯಕ್ಕೆ ಹರಿದು ಬಂದ ಭಕ್ತಸಾಗರ; ವಿಡಿಯೋ ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 19, 2023 | 9:02 PM

ತುಮಕೂರು ಜಿಲ್ಲೆಯ ಪಾವಗಡ ನಗರದ ಶನೇಶ್ವರ ದೇವಾಲಯಕ್ಕೆ ಶ್ರಾವಣ ಶನಿವಾರದ ಹಿನ್ನೆಲೆ ಭಕ್ತ ಸಾಗರ ಹರಿದು ಬಂದಿದ್ದು, ದೇವಾಲಯದ ಮುಂಭಾಗದಲ್ಲಿ ಅಷ್ಟೇ ಅಲ್ಲದೇ ಸರ್ಕಾರಿ ಬಸ್ ನಿಲ್ದಾಣದಲ್ಲೂ ಬಸ್​ಗೆ ಕ್ಯೂ ನಿಲ್ಲಬೇಕಾದ ಸನ್ನಿವೇಶ ಏರ್ಪಟ್ಟಿತ್ತು.

ತುಮಕೂರು, ಆ.19: ಇಂದು(ಆ.19) ಶ್ರಾವಣ ಮಾಸದ ಮೊದಲ ಶನಿವಾರ ಹಿನ್ನೆಲೆ ಪಾವಗಡದ ಐತಿಹಾಸಿಕ ಶನೇಶ್ವರ ದೇವಾಲಯ (Pavagada Shaneswara Temple) ಫುಲ್ ರಶ್ ಆಗಿದೆ. ಹೌದು, ತುಮಕೂರು(Tumakur) ಜಿಲ್ಲೆಯ ಪಾವಗಡ ನಗರದ ಶನೇಶ್ವರ ದೇವಾಲಯಕ್ಕೆ ಶ್ರಾವಣ ಶನಿವಾರದ ಹಿನ್ನೆಲೆ ಭಕ್ತ ಸಾಗರ ಹರಿದು ಬಂದಿದೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇನ್ನು ದೇವಾಲಯದ ಮುಂಭಾಗದಲ್ಲಿ ಅಷ್ಟೇ ಅಲ್ಲದೇ ಸರ್ಕಾರಿ ಬಸ್ ನಿಲ್ದಾಣದಲ್ಲೂ ಬಸ್​ಗೆ ಕ್ಯೂ ನಿಲ್ಲಬೇಕಾದ ಸನ್ನಿವೇಶ ಏರ್ಪಟ್ಟಿತ್ತು.

 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ