ತಪ್ಪು ನಡೆ ಇಡಲಾರೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸೌಧದ ಮೆಟ್ಟಿಲು ಹತ್ತುವಾಗ ಎಡವಿದರು!

ಅಜಯ್ ಸಿಂಗ್ ಶಾಸಕರೇ? ಸಚಿವರೇ? ಅವರನ್ನು ಇತ್ತೀಚಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ನಿಗಮದ (ಕೆಕೆಆರ್ ಡಿಬಿ) ಅಧ್ಯಕ್ಷನಾಗಿ ನೇಮಿಸಲಾಗಿದೆ. ಅದು ಕ್ಯಾಬಿನೆಟ್ ದರ್ಜೆ ಸಚಿವನಿಗೆ ಸಮಾನ ಹುದ್ದೆಯೇ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರು ಸಹ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಬಹುದೆ?

ತಪ್ಪು ನಡೆ ಇಡಲಾರೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸೌಧದ ಮೆಟ್ಟಿಲು ಹತ್ತುವಾಗ ಎಡವಿದರು!
|

Updated on: Aug 19, 2023 | 7:18 PM

ಬೆಂಗಳೂರು: ಸಾಮಾನ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೆಜ್ಜೆ ತಪ್ಪೋದಿಲ್ಲ, ತಪ್ಪು ಹೆಜ್ಜೆ ಹಾಕಲ್ಲ ಅನ್ನೋ ಪ್ರತೀತಿ ಇದೆ. ಆದರೆ ಇಂದು ಸಚಿವ ಸಭೆಯಲ್ಲಿ ಅವರು ಜೇವರ್ಗಿ ಶಾಸಕ ಡಾ ಅಜಯ್ ಸಿಂಗ್ (Dr Ajay Singh) ಜೊತೆ ಆಗಮಿಸಿ ವಿಧಾನ ಸೌಧದ ಮೆಟ್ಟಿಲು ಹತ್ತುವಾಗ ಹೆಜ್ಜೆ ತಪ್ಪಿದರು ಮಾರಾಯ್ರೇ! ಮುಖ್ಯಮಂತ್ರಿ ಕೂಡಲೇ ಸಾವರಿಸಿಕೊಂಡರೋ ಅಥವಾ ಅವರ ಹಿಂದಿದ್ದ ಭದ್ರತಾ ಸಿಬ್ಬಂದಿ (security staff) ಬೀಳದಂತೆ ಹಿಡಿದರೋ ಗೊತ್ತಾಗಲಿಲ್ಲ. ಅವರಲ್ಲಿ ಎಂದಿನ ಲವಲವಿಕೆ ಕಾಣದೆ ಹೋಗಿದ್ದು ಮಾತ್ರ ಸತ್ಯ. ಆದರೆ ಈ ವಿಡಿಯೋ ವೀಕ್ಷಿಸುವ ಸಾಮಾನ್ಯ ಕನ್ನಡಿಗನಿಗೆ ಅರ್ಥವಾಗದ ಎರಡು ವಿಷಯಗಳಿವೆ. ಒಂದು, ಮುಖ್ಯಮಂತ್ರಿಗಳ ಕಾರಿನ ಹಿಂದೆ ಅಧಿಕಾರಿಗಳು, ಭದ್ರತಾ ಪಡೆಯವರು ಮತ್ತು ಪೊಲೀಸರು ಅದ್ಯಾಕೆ ಹಾಗೆ ಓಡಿ ಬರುತ್ತಾರೋ? ಒಬ್ಬ ಪೊಲೀಸ್ ಅಧಿಕಾರಿಯನ್ನು ಗಮನಿಸಿ, ಸಿಎಂ ಕಾರಿಗೆ ವಿಧಾನ ಸೌಧದ ದಾರಿ ತೋರಿಸುತ್ತಿರುವವರ ಹಾಗೆ ವಾಹನದ ಮುಂದೆ ಓಡುತ್ತಾರೆ! ಅರ್ಥವಾಗದ ಎರಡನೇ ಸಂಗತಿಯೆಂದರೆ ಸಿದ್ದರಾಮಯ್ಯ ಇವತ್ತು ಕರೆದಿದ್ದು ಸಚಿವ ಸಂಪುಟ ಸಭೆ. ಅಜಯ್ ಸಿಂಗ್ ಶಾಸಕರೇ, ಸಚಿವರೇ? ಅವರನ್ನು ಇತ್ತೀಚಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ನಿಗಮದ (ಕೆಕೆಆರ್ ಡಿಬಿ) ಅಧ್ಯಕ್ಷನಾಗಿ ನೇಮಿಸಲಾಗಿದೆ. ಅದು ಕ್ಯಾಬಿನೆಟ್ ದರ್ಜೆ ಸಚಿವನಿಗೆ ಸಮಾನ ಹುದ್ದೆಯೇ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರು ಸಹ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಬಹುದೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us