ರಸ್ತೆ ಕಾಮಗಾರಿಯಿಂದ ವ್ಯಾಪಾರ ನೆಲಕಚ್ಚಿ ಬದುಕು ದುಸ್ತರವಾಗಿದೆ; ಡಿಕೆ ಶಿವಕುಮಾರ್ಗೆ ನೋವು ಹೇಳಿಕೊಂಡ ಗಾಂಧಿ ಬಜಾರ್ ಹೂವಾಡಗಿತ್ತಿಯರು
ಬದುಕು ದುಸ್ತರಗೊಂಡಿದೆ, ತಮ್ಮ ಮಕ್ಕಳ ಬದುಕು ತಮ್ಮಂತಾಗುವುದು ಬೇಡ ಅಂತ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇವೆ, ಆದರೆ ಈಗ ಅದಕ್ಕೆ ಸಂಚಕಾರ ಬಂದೊದಗಿದೆ, ರಸ್ತೆ ಅಗಲೀಕರಣಗೊಂಡರೆ ವ್ಯಾಪಾರ ಪುನಃ ಮೊದಲಿನಂತೆ ಕುದುರಿಕೊಳ್ಳುತ್ತದೆ, ಬದುಕು ಹಸನಾಗುತ್ತದೆ ಅಂತ ಈ ಹೂವಾಡಗಿತ್ತಿ ಡಿಸಿಎಂ ಶಿವಕುಮಾರ್ ಅವರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು, ಬೆಂಗಳೂರನ್ನು ಸಿಂಗಪೂರ್ ಮಾಡ್ತೀವಿ ಅಂತ ಹೇಳುತ್ತಿರುವ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರಿಗೆ ನಗರದ ಗಾಂಧಿ ಬಜಾರ್ ನಲ್ಲಿ (Gandhi Bazaar) ದಶಕಗಳಿಂದ ಹೂ ಮಾರುವ ಈ ಮಹಿಳೆ ಕಳೆದೊಂದು ವರ್ಷದಿಂದ ತಾನು ಮತ್ತು ತನ್ನಂತೆಯೇ ಅಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿರುವ ಹಲವಾರು ಹೂವಾಡಗಿತ್ತಿಯರು (florists) ಅನುಭವಿಸುತ್ತಿರುವ ನೋವು, ಯಾತನೆ, ಸಂಕಟವನ್ನು ವಿವರಿಸುತ್ತಿದ್ದಾರೆ. ರಸ್ತೆಯನ್ನು ಕಿರಿದುಗೊಳಿಸಿರುವುದರಿಂದ ವಾಹನಗಳಿಗೆ ಪಾರ್ಕಿಂಗ್ ಸ್ಥಳ ಇಲ್ಲದಂತಾಗಿ ಜನ ಹೂ ಕೊಳ್ಳಲು ಬೇರೆ ಮಾರ್ಕೆಟ್ ಗಳಿಗೆ ಹೋಗುತ್ತಿದ್ದಾರೆ. ಕಾಮಗಾರಿ ಒಂದು ವರ್ಷದಿಂದ ನಡೆಯುತ್ತಿರುವುದರಿಂದ ಹೂ ಮಾರುವವರ ವ್ಯಾಪಾರ ನೆಲಕಚ್ಚಿದೆ. ತಮ್ಮ ಬದುಕು ದುಸ್ತರಗೊಂಡಿದೆ, ತಮ್ಮ ಮಕ್ಕಳ ಬದುಕು ತಮ್ಮಂತಾಗುವುದು ಬೇಡ ಅಂತ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇವೆ, ಆದರೆ ಈಗ ಅದಕ್ಕೆ ಸಂಚಕಾರ ಬಂದೊದಗಿದೆ, ರಸ್ತೆ ಅಗಲೀಕರಣಗೊಂಡರೆ ವ್ಯಾಪಾರ ಪುನಃ ಮೊದಲಿನಂತೆ ಕುದುರಿಕೊಳ್ಳುತ್ತದೆ, ಬದುಕು ಹಸನಾಗುತ್ತದೆ ಅಂತ ಈ ಹೂವಾಡಗಿತ್ತಿ ಡಿಸಿಎಂ ಶಿವಕುಮಾರ್ ಅವರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ