Anna Bhagya Scheme; ಮೂರು ತಿಂಗಳವರೆಗೆ ಹಣ ಕೊಡುತ್ತೇವೆ, ಅಕ್ಕಿ ಲಭ್ಯವಾಗುತ್ತಿದ್ದಂತೆಯೇ ಅದನ್ನೇ ನೀಡುತ್ತೇವೆ: ಜಿ ಪರಮೇಶ್ವರ್, ಗೃಹ ಸಚಿವ

Anna Bhagya Scheme; ಮೂರು ತಿಂಗಳವರೆಗೆ ಹಣ ಕೊಡುತ್ತೇವೆ, ಅಕ್ಕಿ ಲಭ್ಯವಾಗುತ್ತಿದ್ದಂತೆಯೇ ಅದನ್ನೇ ನೀಡುತ್ತೇವೆ: ಜಿ ಪರಮೇಶ್ವರ್, ಗೃಹ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 29, 2023 | 1:03 PM

ಮುಂದಿನ ಮೂರು ತಿಂಗಳವರೆಗೆ ಅಕ್ಕಿ ಬದಲು ಹಣ ನೀಡುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ.

ತುಮಕೂರು: ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಆಯೋಜಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ಹೊಂದಿಸಲು ಸಾಧ್ಯವಾಗದ ಕಾರಣ ಹಣ ಅದರ ಬದಲು ಅಕ್ಕಿ ನೀಡಲಾಗುತ್ತಿದೆ ಎಂದು ಹೇಳಿದರು. ಆಹಾರ ಭದ್ರತೆ ಕಾಯ್ದೆ (Food Security Act) ಅಡಿ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಜೊತೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವ ಗ್ಯಾರಂಟಿಯನ್ನು ಕಾಂಗ್ರೆಸ್ ಮಾಡಿತ್ತು. ಆದರೆ ರಾಜ್ಯ ಸರ್ಕಾರಗಳಿಗೆ ಅಕ್ಕಿ ಪೂರೈಸಲೆಂದೇ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಆಹಾರ ನಿಗಮ (Food Corporation of India) ಮೊದಲಿ ಅಕ್ಕಿ ನೀಡುವುದಾಗಿ ಹೇಳಿ ಬಳಿಕ ಕೇಂದ್ರ ಸರ್ಕಾರದ ಒತ್ತಡದಲ್ಲಿ ಕೊಡಲ್ಲ ಅಂತ ಪತ್ರ ಬರೆಯಿತು ಎಂದು ಗೃಹ ಸಚಿವ ಹೇಳಿದರು. ಮುಂದಿನ ಮೂರು ತಿಂಗಳವರೆಗೆ ಅಕ್ಕಿ ಬದಲು ಹಣ ನೀಡುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಒಮ್ಮೆ ಅಕ್ಕಿ ಸರಬರಾಜು ಶುರುವಾಯಿತು ಅಂತಾದರೆ ಅದನ್ನೇ ನೀಡಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ