ಒಂದೆಡೆ ಸೇರಿದ್ದ ಮುಸ್ಲಿಂ ಬಾಂಧವರನ್ನು ಕಂಡು ಛೋಟಾ ಪಾಕಿಸ್ತಾನ್ ಎಂದ ವ್ಯಕ್ತಿ; ವೈರಲ್ ಆದ ವಿಡಿಯೋ ಇಲ್ಲಿದೆ

| Updated By: sandhya thejappa

Updated on: May 05, 2022 | 10:49 AM

ರಂಜಾನ್ ದಿನದಂದು ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಒಂದೆಡೆ ಸೇರಿದ್ದರು. ನಮಾಜ್ ಮುಗಿಸಿ ಒಂದು ಕಡೆ ಸೇರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ.

ಮೈಸೂರು: ಹಿಜಾಬ್, ಹಲಾಲ್, ಆಜಾನ್ ವಿವಾದದಿಂದ ರಾಜ್ಯದಲ್ಲಿ ಎರಡು ಧರ್ಮಗಳ ನಡುವೆ ಈಗಾಗಲೇ ಸಂಘರ್ಷ ಶುರುವಾಗಿದೆ. ಈ ನಡುವೆ ಮೈಸೂರಿನಲ್ಲಿ (Mysuru) ವಿಡಿಯೋವೊಂದು ವೈರಲ್ ಆಗಿದ್ದು, ಇದು ಗಲಭೆಗೆ ಕಾರಣವಾಗುತ್ತಾ? ಎಂಬ ಅನುಮಾನ ಮೂಡಿದೆ. ರಂಜಾನ್ (Ramadan) ದಿನದಂದು ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಒಂದೆಡೆ ಸೇರಿದ್ದರು. ನಮಾಜ್ ಮುಗಿಸಿ ಒಂದು ಕಡೆ ಸೇರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ದೃಶ್ಯ ಸೆರೆಹಿಡಿಯುವಾಗ ಆ ವ್ಯಕ್ತಿ ಕೌಲಂದೆ ಗ್ರಾಮ ಚೋಟಾ ಪಾಕಿಸ್ತಾನ್ ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸ್ಪಿ ಜೊತೆ ಮಾತನಾಡುತ್ತೇನೆ. ಅದನ್ನ ಗಮನಿಸಿ ಕ್ರಮ ತೆಗೆದುಕೊಳ್ಳಲು ಹೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ

ನಿಮ್ಮ ಟೈಮ್​ಲೈನ್: ಡಾ. ರಾಮಪ್ರಸಾದ ಕೊಣನೂರು ಹೇಳಿರುವ ಎಂಟು ಮರೆವಿನ ಕಥೆಗಳು

ತಂದೆಯ ಕೊನೇ ಆಸೆ ನೆರವೇರಿಸಲು ಈ ಹಿಂದು ಸೋದರಿಯರು ಮಾಡಿದ್ದೇನು?-ಇಬ್ಬರಿಗೂ ಸನ್ಮಾನ ಮಾಡುತ್ತೇವೆ ಎಂದು ಖುಷಿ ವ್ಯಕ್ತಪಡಿಸಿದ ಮುಸ್ಲಿಂ ಮುಖಂಡರು

Published On - 10:41 am, Thu, 5 May 22

Follow us on