Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಟೈಮ್​ಲೈನ್: ಡಾ. ರಾಮಪ್ರಸಾದ ಕೊಣನೂರು ಹೇಳಿರುವ ಎಂಟು ಮರೆವಿನ ಕಥೆಗಳು

Dementia : ಐವತ್ತರ ಶಿವಪ್ಪನವರಿಗೆ ಪೆನ್ಸಿಲ್, ಲೋಟ ಏನು ತೋರಿಸಿದರು ಅದರ ಹೆಸರು ಹೇಳಲು ಬರುವುದಿಲ್ಲ. ಒಂದು ಚಿಕ್ಕ ವಾಕ್ಯವನ್ನು ವಾಪಸ್ ಹೇಳುವಂತೆ ಕೇಳಿ, ಅವರು ಸೋಲುತ್ತಾರೆ. ಇನ್ನು ಐವತ್ತರ ರಾಜಪ್ಪನವರು ಏನೋ ಪ್ರಶ್ನೆ ಕೇಳಿದರೆ ಅವರೇನೋ ಉತ್ತರ ಕೊಡುತ್ತಾರೆ. ಒಂದಕ್ಕೊಂದು ಸಂಬಂಧವೇ ಇರೋಲ್ಲ.

ನಿಮ್ಮ ಟೈಮ್​ಲೈನ್: ಡಾ. ರಾಮಪ್ರಸಾದ ಕೊಣನೂರು ಹೇಳಿರುವ ಎಂಟು ಮರೆವಿನ ಕಥೆಗಳು
ಡಾ. ರಾಮಪ್ರಸಾದ ಕೊಣನೂರು, ವೈದ್ಯರು, ಅಮೆರಿಕಾ
Follow us
ಶ್ರೀದೇವಿ ಕಳಸದ
|

Updated on: May 05, 2022 | 10:35 AM

ಚಿತ್ತವಿಕಲತೆ | Dementia : ಕತೆ ಒಂದು; ಎಪ್ಪತ್ತೆಂಟರ ಅನುಸೂಯ ಮೇಡಂ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವರು. ಈಗ ನಿವೃತ್ತಿ ಜೀವನ. ಇಬ್ಬರು ಗಂಡು ಮಕ್ಕಳು ಒಬ್ಬ ಅಮೆರಿಕದಲ್ಲಿದ್ದರೆ ಇನ್ನೊಬ್ಬ ದುಬೈನಲ್ಲಿ. ಎಂಬತ್ತು ವರ್ಷದ ರಾಘವೇಂದ್ರ ರಾಯರು ಅವರ ಪತಿ. ಮನೆಗೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುತ್ತ ನಿವೃತ್ತಿ ಜೀವನ ಸುಖವಾಗಿ ಸಾಗಿಸುತ್ತಿದ್ದಾರೆ. ಮೇಡಂ ಸಹ ಹೊರಗೆಲಸಗಳಿಗೆ ಗಂಡನ ಸಹಾಯ ಕೋರುವವರಲ್ಲ. ಬ್ಯಾಂಕಿನ ಕೆಲಸ, ಎಲೆಕ್ಟ್ರಿಕ್ ಬಿಲ್ ಪಾವತಿ, ನೀರು ಮತ್ತೊಂದು ಎಲ್ಲದಕ್ಕೂ ತಾವೇ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಾರೆ. ರಾಘವೇಂದ್ರರಾಯರು ತಮ್ಮ ಹೆಂಡತಿಯನ್ನು ಗಮನಿಸಿದಂತೆ, ಈಗ ಆರು ತಿಂಗಳಿಂದ ತಮ್ಮ ಹೆಂಡತಿಯಲ್ಲಿ ಚಿಕ್ಕಪುಟ್ಟ ಬದಲಾವಣೆ ಕಂಡಿದ್ದಾರೆ. ಬ್ಯಾಂಕಿನ ಚೆಕ್ ಬರೆಯಲು ಪರೆದಾಡುತ್ತಾರೆ. ಬೀರು ಬೀಗ, ಮನೆ ಬೀಗ ಎಲ್ಲೆಲ್ಲಿಯೋ ಇಟ್ಟು ಪರದಾಡುತ್ತಾರೆ. ಗೆಳತಿಯರ ಮನೆಗೆ ಹಬ್ಬ ಹರಿದಿನಗಳಲ್ಲಿ ಬರುತ್ತೇನೆಂದು ಹೇಳಿದ್ದನ್ನು ಮರೆತೂ ಬಿಡುತ್ತಾರೆ. ಕೇಳಿದ್ದನ್ನೇ ಮತ್ತೆಮತ್ತೆ ಕೇಳುತ್ತಾರೆ. ಮಕ್ಕಳು ಫೋನ್ ಮಾಡಿದಾಗ ಮಾತನಾಡುತ್ತ ಮೊಮ್ಮಕ್ಕಳ ಹೆಸರು ಹೇಳಲು ಮರೆಯುತ್ತಾರೆ. ಆದರೆ ಅಡಿಗೆಗೆಲಸ, ಊಟದ ತಯಾರಿ ಇದರಲ್ಯಾವುದು ಬದಲಾವಣೆ ಕಂಡಿಲ್ಲ. ಡಾ. ರಾಮಪ್ರಸಾದ ಕೊಣನೂರು, ವೈದ್ಯ, ಅಮೆರಿಕಾ

ವೈದ್ಯರ ಹತ್ತಿರ ತೋರಿಸಿದರೆ ಅರೋಗ್ಯ ಚೆನ್ನಾಗಿಯೇ ಇದೆ. ಬಿಪಿ ಇಲ್ಲ, ಶುಗರ್ ಇಲ್ಲ. ರಕ್ತ ಪರೀಕ್ಷೆ ಮೂವತ್ತರ ವಯಸ್ಸಿನವರಿಗೆ ಇರುವಂತಿದೆ. ಆದರೆ ತಿಂಗಳು, ದಿನ ಜ್ಞಾಪಕ ಇರೋಲ್ಲ. ಮೂರು ವರ್ಷಗಳ ನಂತರ ಈಗ ಅಡುಗೆ ಕೆಲಸವು ಕಷ್ಟ. ಒಲೆ ಆರಿಸಲು ಮರೆಯುತ್ತಾರೆ. ಹಾಲು ಕಾಯಲು ಇಟ್ಟು ಉಕ್ಕು ಬರುವ ಮೊದಲು ತೆಗೆಯಲು ಮರೆಯುತ್ತಾರೆ. ಕೆಳಗೆ ಬಿದ್ದ ಹಗ್ಗ ನೋಡಿ ಹಾವೆಂದು ಹೆದರುತ್ತಾರೆ. ಇಲ್ಲದ ಶಬ್ದ ಕೇಳಿಸುತ್ತಿದೆ ಅವರಿಗೆ.

ಅನುಸೂಯ ಅವರಿಗೆ ಆಗಿರುವುದು Early stage of Alzheimer disease. ಇದು ಹೆಂಗಸರಲ್ಲಿ ಹೆಚ್ಚು. ಮೂರು ವರ್ಷದ ಒಳಗೆ ತಲೆಯ CT scan ಅಥವಾ MRI ಮಾಡಿಸಿದರೆ ಮೆದುಳಿನ ಗಾತ್ರ ಮುಖ್ಯವಾಗಿ Hippocampus ನ ಗಾತ್ರ ಕುಗ್ಗಿರುತ್ತದೆ. Scan ನ ಮತ್ತೊಂದು ಉಪಯೋಗ ಮೆದುಳಿನಲ್ಲಿ tumor, abscess, stroke, ರಕ್ತ ಹೆಪ್ಪುಗಟ್ಟುವಿಕೆ ಆಗಿದ್ದರು ಕೂಡ ಪತ್ತೆ ಹಚ್ಚಬಹುದು. Mini mental status exam ಮತ್ತು ಇತರೆ ಪರೀಕ್ಷೆಗಳನ್ನು ಮಾಡಿಸಿ ವೈದ್ಯರು ಈ ಕಾಯಿಲೆ ಪತ್ತೆ ಹಚ್ಚಬಹುದು. ಕೆಲವು ಮಾತ್ರೆಗಳು ಈ ಕಾಯಿಲೆಯನ್ನು ವೇಗವಾಗಿ ಸಾಗದಂತೆ ತಡೆಗಟ್ಟುತ್ತದೆ. ಚಿಕ್ಕ ವಯಸ್ಸಿನಲ್ಲಿ ಆದಷ್ಟು ಮೆದುಳಿಗೆ ಒಂದಲ್ಲ ಒಂದು ಕೆಲಸ ಕೊಡುತ್ತ ಬಂದಿದ್ದರೇ ಈ ಕಾಯಿಲೆ ಬೇಗ ಬರದಂತೆ ಮುಂದೂಡಬಹುದು. ಉದಾಹರಣೆಗೆ ಪಠಣ, ಬಹುಭಾಷೆ ಕಲಿಯುವಿಕೆ, Calculator ಸಹಾಯವಿಲ್ಲದೆ ಲೆಕ್ಕ ಮಾಡುವುದು ಮುಂತಾದವು. ಹೃದಯದ ಕಾಯಿಲೆ ಬರದಂತೆ ಏನೇನು ಆಹಾರ ಸೇವಿಸುತ್ತೇವೋ ಮತ್ತು Alcohol ನಿಂದ ದೂರ ಇರುವುದರಿಂದಲೂ ಈ ಕಾಯಿಲೆ ಮುಂದೂಡ ಬಹುದು ಇಲ್ಲ ತಡೆಯ ಬಹುದು.

ಕತೆ ಎರಡು ಪ್ರಕಾಶ ಶೆಟ್ಟರಿಗೆ ಐವತ್ತೈದು ವಯಸ್ಸು. ಮೊದಲೇ ಶೆಟ್ಟರು ಕಾಸುಕಾಸಿಗೂ ಲೆಕ್ಕ ಇಡುತ್ತಿದ್ದವರು. ಈಗ ಒಂದು ಆರು ತಿಂಗಳಿನಿಂದ ಮನುಷ್ಯ ಏಗ್ದಂ ಬದಲಾವಣೆ. ತನ್ನಲ್ಲಿದ್ದದ್ದನ್ನೆಲ್ಲ ಬೇರೆಯವರಿಗೆ ಕೊಡುತ್ತಿದ್ದಾರೆ ದಾನ ಧರ್ಮ ಹೆಚ್ಚಾಗಿದೆ. ಇಲ್ಲಿಯವರೆಗೆ ಸಿಗರೇಟ್ ಮುಟ್ಟದ ಮನುಷ್ಯ ಈಗ ಆಗಾಗ ದಂ ಎಳೆಯುತ್ತಾರೆ. ಪಕ್ಕದ ಮನೆ ಹೆಂಗಸರನ್ನು ಕೆಂಗಣ್ಣು ಬಿಟ್ಟು ಕೊಂಡು ನೋಡುತ್ತಾ ನಿಂತು ಬಿಡುತ್ತಾರೆ. ಕ್ರಿಕೆಟ್ ಬಾಲ್ ತಮ್ಮ ಮನೆ ಕಾಂಪೋಂಡ್ ಒಳಗೆ ಬಿದ್ದಿದೆ ಎಂದು ತೆಗೆದು ಕೊಳ್ಳಲು ಬಂದ ಐದು ವರ್ಷದ ಚಿರಾಗನಿಗೆ ಬರೇ ಬರುವಂತೆ ಹೊಡೆದು ಕಳುಹಿಸುತ್ತಾರೆ. ಮೂರು ಹೊತ್ತು ಮನೆಯಲ್ಲೂ ತಿಂದೂ, ದಿನಕ್ಕೆರಡು ಸಲ ಹೋಟೆಲ್ ನಲ್ಲಿ ದೋಸೆ ಪೂರಿ ತಿಂದು ಮನೆಗೆ ಬರುತ್ತಾರೆ.

ಶೆಟ್ಟರಿಗೆ Frontotemporal dementia. ಇದು ಮೆದುಳಿನ frontotemporal ಜಾಗದಲ್ಲಿ ನರಗಳ ಕುಂದತೆಯಿಂದ ಬರುವಂತಹುದು. ಇಲ್ಲಿ ಮನುಷ್ಯನ ನಡುವಳಿಕೆಯಲ್ಲಿ ಹಠಾತ್ ಬದಲಾವಣೆ ಕಾಣಿಸುತ್ತದೆ.

ಡಾ. ರಾಮಪ್ರಸಾದ ಕೊಣನೂರರ ಈ ಬರಹವನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ’ನನ್ನ ಕೆನ್ನೆಗೆ ಬ್ಲೀಚ್ ಹಾಕಿ ತೊಳೆದುಬಿಟ್ಟೆ’

ಕತೆ ಮೂರು ಅರವತ್ತರ ಗೋವಿಂದೇ ಗೌಡ್ರು ಠಾಕುಠೀಕಾಗಿ ಬುಲೆಟ್ ಓಡಿಸಿ ಕೊಂಡು ಇದ್ದವರು ಈಗ ಒಂದು ವರ್ಷದಿಂದ ಕೈ ಬೆರಳುಗಳನ್ನು ಅಲ್ಲಾಡಿಸುತ್ತಿರುತ್ತಾರೆ. ಕಾಫಿ ಕಪ್ ಕುಡಿಯಲು ಕೊಟ್ಟರೆ ತೆಗೆದುಕೊಳ್ಳುವಾಗ ಚೆಲ್ಲಿಯೇ ಚೆಲ್ಲುತ್ತಾರೆ. ಆಗಾಗ ಬೀಳುವುದರಿಂದ ಮನೆಯವರು ಬುಲೆಟ್​ನ ಕೀ ತೆಗೆದು ಬಚ್ಚಿಟ್ಟಿದ್ದಾರೆ. ತೋಟಕ್ಕೆ ಕಾರಿನಲ್ಲಿ ಮಗ ಕರೆದು ಕೊಂಡು ಹೋದಾಗ ಇಳಿಜಾರಿನಲ್ಲಿ ಕಂಟ್ರೋಲ್ ಇಲ್ಲದೆ ಬಿದ್ದು ಹೋಗಿ ಬಿಡುತ್ತಾರೇನೋ ಎಂಬಂತೆ ನಡೆಯುತ್ತಾರೆ. ಹೆಜ್ಜೆ ಚಿಕ್ಕ ಚಿಕ್ಕದಾಗಿ ಇಡುತ್ತಾರೆ. ಇತ್ತೀಚಿಗೆ ಅವರು ಬರೆಯುವ ಅಕ್ಷರದ ಗಾತ್ರ ಕೂಡ ಚಿಕ್ಕದಾಗಿದೆ. ಇತ್ತೀಚಿನ ದಿನಗಳಲ್ಲಿ ಮರೆವು ಎಲ್ಲ ಮರೆವು.

ಗೌಡರಿಗೆ Lewy body dementia. ಮೇಲೆ ಹೇಳಿದ ಎಲ್ಲ ಚಿಹ್ನೆಗಳು Parkinson ಕಾಯಿಲೆಯಲ್ಲಿ ಕಾಣಿಸಿಕೊಳ್ಳುವ ಚಿಹ್ನೆಗಳು. Parkinson ಕಾಯಿಲೆಯ ಚಿಕಿತ್ಸೆ ಸರಿಯಾಗಿ ಪಡೆದು ಕೊಂಡರೆ ಈ ಕಾಯಿಲೆ ತಡೆಯ ಬಹುದು ಇಲ್ಲ ಮುಂದೂಡಬಹುದು.

ಕತೆ ನಾಲ್ಕು ಐವತ್ತರ ಶಿವಪ್ಪನವರಿಗೆ ಮರೆವು. ಪೆನ್ಸಿಲ್, ಲೋಟ ಏನು ತೋರಿಸಿದರು ಅದರ ಹೆಸರು ಹೇಳಲು ಬರುವುದಿಲ್ಲ. ನೀವೇನಾದರೂ ಒಂದು ಚಿಕ್ಕ ಸುಲಭದ ವಾಕ್ಯ ಹೇಳಿ ಅವರಿಗೆ ಆ ವಾಕ್ಯವನ್ನು ವಾಪಸ್ ಹೇಳುವಂತೆ ಕೇಳಿ ಕೊಂಡರೆ ಹೇಳಲು ಸೋಲುತ್ತಾರೆ. ಐವತ್ತರ ರಾಜಪ್ಪನವರು ನಾವು ಏನೋ ಪ್ರಶ್ನೆ ಕೇಳಿದರೆ ಅವರೇನೋ ಉತ್ತರ ಕೊಡುತ್ತಾರೆ. ಒಂದಕ್ಕೊಂದು ಸಂಬಂಧವೇ ಇರೋಲ್ಲ.

ಶಿವಪ್ಪ ಮತ್ತು ರಾಜಪ್ಪನವರಿಗೆ ಬಂದಿರುವುದು Language predominant dementia. ಶಿವಪ್ಪನವರಿಗೆ ಮೆದುಳಿನ Brocas area ದಲ್ಲಾದ ತೊಂದರೆಯಿಂದ ಏನನ್ನಾದರೂ ಅಭಿವ್ಯಕ್ತ ಗೊಳಿಸುವುದರಲ್ಲಿ ತಪ್ಪುತ್ತಾರೆ. ಮಾತನಾಡದೆ ಏನನ್ನಾದರೂ ಮಾಡಿ ತೋರಿಸಲು ಹೇಳಿದರೆ ಸುಲಭವಾಗಿ ಮಾಡುತ್ತಾರೆ. ರಾಜಪ್ಪನವರಿಗೆ ಮೆದುಳಿನ Wernicke’s area ದಲ್ಲಾದ ತೊಂದರೆ. ಇವರಿಗೆ ನಾವೇನು ಹೇಳಿದರು ತಿಳಿದು ಕೊಳ್ಳುವ ಶಕ್ತಿ ಕಳೆದು ಕೊಂಡಿರುತ್ತಾರೆ. ಹಾಗಾಗಿ ನಾವು ಹೇಳುವುದೊಂದು ಅವರು ಮಾಡುವುದೊಂದು.

ಕತೆ ಐದು ಬಾಕ್ಸಿಂಗ್ ಆಡುತ್ತಿದ್ದ ಮೊಹಮದ್ ಆಲಿ ಅರವತ್ತರ ಆಸುಪಾಸಿನಲ್ಲಿದ್ದಾಗ ಮರೆವು ಕಾಡತೊಡಗಿದ್ದು. ಮೊಹಮದ್ ಅಲಿಗೆ ಆಗಿರುವುದು Traumatic brain syndrome. ಬಾಕ್ಸಿಂಗ್ಸ ನಲ್ಲಿ ಸತತ ಮುಖದ ಹೊಡೆತಕ್ಕೆ ಒಳ ಪಟ್ಟು ತಮ್ಮ ಅರವತ್ತು ಎಪ್ಪತ್ತರ ಆಸುಪಾಸಿನಲ್ಲಿ ಮುಖ್ಯವಾಗಿ ಮೆದುಳಿನ Frontal ಮತ್ತು temporal ಭಾಗಕ್ಕೆ ಘಾಸಿಯಾಗಿರುತ್ತದೆ. ಇವರಲ್ಲಿ ನಡೆವಳಿಕೆಯಲ್ಲಿ ಕೂಡ ಬದಲಾವಣೆ ಕಾಣಬಹುದು.

ಇದನ್ನೂ ಓದಿ : New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’

ಕತೆ ಆರು ಜವರಪ್ಪನವರು ಅರವತ್ತಾರನೇ ವಯಸ್ಸಿಗೆ ಪಾರ್ಶ್ವ ವಾಯುವಿಗೆ ತುತ್ತಾದರು. ಈಗ ವರಿಗೆ ಎಪ್ಪತ್ತು ವರ್ಷ. ಪುಣ್ಯಕ್ಕೆ ಮಾತು ಹೋಗಲಿಲ್ಲ. ಈಗ ಊರುಗೋಳಿಲ್ಲದೆ ನಡೆಯಲು ಸಹ ಆಗುತ್ತಿದೆ. ಮಕ್ಕಳು ತಂದೆಯಲ್ಲಿ ಮರೆವು ಗಮನಿಸುತ್ತಿದ್ದಾರೆ. ಜವರಪ್ಪನವರಿಗೆ ಆಗಿರುವುದು Vascular dementia. ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗಿತ್ತ ಬಂದು ನರದೌರ್ಬಲ್ಯ ಕಾಣಿಸಿಕೊಂಡು ಎಲ್ಲವನ್ನು ಮರೆಯುವುದು.

ಕತೆ ಏಳು ಅಲೆಕ್ಸಾಂಡರ್ ಅವರಿಗೆ ಐವತ್ತೆರಡು ವಯಸ್ಸು. ನಡೆಯಲು ತೊಂದರೆಪಡುತ್ತಾರೆ. ಹೆಜ್ಜೆ ಹಾಕಿದಾಗ ಕಾಲು ನೆಲಕ್ಕೆ ಮ್ಯಾಗ್ನೆಟ್ ಅಂಟುವಂತೆ ನಡೆಯುತ್ತಾರೆ. ಜಲಬಾಧೆ ತಡೆಯಲು ಆಗದೆ ಒಮ್ಮೊಮ್ಮೆ ಬಾತ್​ರೂಮ್ ತಲುಪುವ ಮೊದಲೇ ಪ್ಯಾಂಟ್ ಒದ್ದೆ ಮಾಡಿ ಕೊಂಡಿರುತ್ತಾರೆ. ಬಾಲ್ಯ ಸ್ನೇಹಿತ ರಾಮ ಫೋನ್ ಮಾಡಿದರು ಗುರುತು ಹಿಡಿಯುತ್ತಿಲ್ಲ.

ಅಲೆಕ್ಸಾಂಡರ್​ಗೆ ಬಂದಿರುವುದು Normal pressure Hydrocephalus. ಮೆದುಳಿನಲ್ಲಿ ಮೆದುಳಿನ ರಸ ಹರಿಯಲು Ventricles ಎಂಬ ಸಣ್ಣ ಗುಹೆಯಂತಹ ದಾರಿಯಿರುತ್ತದೆ. ಈ ದಾರಿ ಯಾವಾಗ ಹಿಗ್ಗುತ್ತದೋ ಆಗ ಮೇಲಿನ ಮೂರು ಚಿಹ್ನೆಗಳಾದ ನಡೆಯುವ ತೊಂದರೆ, ಜಲಬಾಧೆ ತಡೆಯುವಲ್ಲಿ ಸೋಲುವುದು ಮತ್ತು ಮರೆವು. ಈ ಕಾಯಿಲೆಯಲ್ಲಿ Ventricles ನಿಂದ ಹೊಟ್ಟೆಯಲ್ಲಿನ Peritoneum ಗೆ ದಾರಿ ಕಲ್ಪಿಸಿ ಮೆದುಳಿನ ರಸ Peritoneum ಸೇರುವಂತೆ (Ventriculoperitoneal shunt) ತಡೆಗಟ್ಟಬಹುದು.

ಕತೆ ಎಂಟು ಮೊಹಮ್ಮದ್ ಸಾಬರು ಅರವತ್ತನೇ ಹುಟ್ಟುಹಬ್ಬಕ್ಕೆ ಸ್ನೇಹಿತರಿಗೆಲ್ಲ ಭರ್ಜರಿ ಊಟ ಹಾಕಿಸಿದ್ದರು. ಮೂರು ತಿಂಗಳ ನಂತರ ಸ್ನೇಹಿತರು ಅವರಿಗೆ ಸಿಕ್ಕು ಮಾತನಾಡಿಸಿದಾಗ ಅವರಿಗೆ ಯಾರನ್ನು ಗುರುತು ಹಿಡಿಯಲು ಆಗುತ್ತಿಲ್ಲ. ಮೊಹಮ್ಮದ್ ಸಾಬರಿಗೆ ಆಗಿರುವುದು Rapidly Progressive Dementia. ಇಲ್ಲಿ ಕೆಲ ತಿಂಗಳ ಹಿಂದೆ ಚೆನ್ನಾಗಿದ್ದವರು ಸ್ವಲ್ಪ ದಿನಗಳಲ್ಲೇ ಮರೆವಿಗೆ ತುತ್ತಾಗುತ್ತಾರೆ. ಉದಾಹರಣೆಗೆ ಕಾಯಿಲೆಗಳಾದ Creutzfeldt-Jakob disease, HIV, Neurosyphilis, Multiple sclerosis ಇನ್ನು ಹಲವು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಬರಹಗಳನ್ನು ಇಲ್ಲಿ ಓದಿ : https://tv9kannada.com/tag/nimma-timeline

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್