ಊಟದ ಮುನ್ನವೇ ಸಿಹಿ ತಿನ್ನಬೇಕೆಂದು ಹೇಳುತ್ತೆ ಆಯುರ್ವೇದ, ಏಕೆ?

ಊಟಕ್ಕೂ ಮುನ್ನ ಸಿಹಿಯನ್ನು ತಿನ್ನುವುದರಿಂದ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ. ಆಯುರ್ವೇದ ವೈದ್ಯರಾದ ಡಾ. ನಿತಿಕಾ ಕೊಹ್ಲಿ ಹೇಳುವ ಪ್ರಕಾರ ಆಹಾರದ ಮಧ್ಯೆ ಅಥವಾ ಕೊನೆಯಲ್ಲಿ ಸಿಹಿಯನ್ನು ಸೇವಿಸುವುದರಿಂದ ಉದರ ಸಂಬಂಧಿ ಕಾಯಿಲೆಗಳು ಬರಬಹುದು ಎನ್ನುತ್ತಾರೆ ವೈದ್ಯರು. ಹೆಚ್ಚಿನವರು ಊಟ ಮಾಡಿದ ನಂತರ ಸಿಹಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ.

ಊಟದ ಮುನ್ನವೇ ಸಿಹಿ ತಿನ್ನಬೇಕೆಂದು ಹೇಳುತ್ತೆ ಆಯುರ್ವೇದ, ಏಕೆ?
ಸಿಹಿ ತಿನಿಸುಗಳು
Follow us
TV9 Web
| Updated By: ನಯನಾ ರಾಜೀವ್

Updated on:May 05, 2022 | 4:32 PM

ಬಹುತೇಕರಿಗೆ ಸಿಹಿ ಇಲ್ಲದೆ ಊಟವೇ ರುಚಿಸುವುದಿಲ್ಲ, ಪೂರ್ಣವಾದಂತೆಯೂ ಅನಿಸುವುದಿಲ್ಲ, ಊಟದ ಕೊನೆಯಲ್ಲಿ ಏನಾದರೊಂದು ಸಿಹಿ ಇರಲೇಬೇಕು. ಆದರೆ ಆಯುರ್ವೇದ ಹೇಳುವುದೇ ಬೇರೆ, ಎಂದೂ ಊಟದ ಕೊನೆಯಲ್ಲಿ ಸಿಹಿಯನ್ನು ತಿನ್ನಬೇಡಿ ಎಂದು. ಊಟಕ್ಕೂ ಮುನ್ನ ಸಿಹಿಯನ್ನು ತಿನ್ನುವುದರಿಂದ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ. ಆಯುರ್ವೇದ ವೈದ್ಯರಾದ ಡಾ. ನಿತಿಕಾ ಕೊಹ್ಲಿ ಹೇಳುವ ಪ್ರಕಾರ ಆಹಾರದ ಮಧ್ಯೆ ಅಥವಾ ಕೊನೆಯಲ್ಲಿ ಸಿಹಿಯನ್ನು ಸೇವಿಸುವುದರಿಂದ ಉದರ ಸಂಬಂಧಿ ಕಾಯಿಲೆಗಳು ಬರಬಹುದು ಎನ್ನುತ್ತಾರೆ ವೈದ್ಯರು. ಹೆಚ್ಚಿನವರು ಊಟ ಮಾಡಿದ ನಂತರ ಸಿಹಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಹೋಟೆಲ್​ನಲ್ಲಿ ಅಥವಾ ಹೊರಗೆ ಎಲ್ಲಾದರೂ ತಿಂದರೆ, ಅಂತಿಮವಾಗಿ ಐಸ್ ಕ್ರೀಂ, ಸಿಹಿತಿಂಡಿಗಳು ಅಥವಾ ಯಾವುದೇ ಪುಡ್ಡಿಂಗ್ ನಂತಹ ಸಿಹಿತಿಂಡಿಗಳನ್ನು ನೀಡಲಾಗುತ್ತದೆ.

ವಾಸ್ತವವಾಗಿ, ಸಿಹಿ ವಸ್ತುಗಳು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುತ್ತವೆ, ಇದು ಜೀರ್ಣಾಂಗ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ ಊಟಕ್ಕೂ ಮೊದಲೇ ಸಿಹಿ ತಿನ್ನಬೇಕು.ಆಹಾರದ ಬಗ್ಗೆ ಹಿಂದೂ ಧರ್ಮಗ್ರಂಥಗಳಲ್ಲಿ ಮತ್ತು ಆಯುರ್ವೇದದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಮತ್ತು ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಪ್ರಾಚೀನ ಕಾಲದಿಂದಲೂ ಪ್ರತಿಯೊಬ್ಬರೂ ಈ ವಿಷಯಗಳನ್ನು ಅನುಸರಿಸುತ್ತಿದ್ದಾರೆ, ಆದರೆ ಆಧುನಿಕ ಕಾಲದಲ್ಲಿ ಇದೆಲ್ಲವೂ ಒಂದೊಂದಾಗಿ ಮರೆಯಾಗುತ್ತಿದೆ.

ಈಗ ಜನರು ಪಾಶ್ಚಿಮಾತ್ಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನೀವು ಉತ್ತಮ ಆರೋಗ್ಯವನ್ನು ಮತ್ತು ಅಪಾರ ಸಂಪತ್ತನ್ನು ಪಡೆಯಲು ಬಯಸಿದರೆ, ಸಾಂಪ್ರದಾಯಿಕ ಊಟದ ನಿಯಮಗಳನ್ನು ಅನುಸರಿಸುವುದು ಉತ್ತಮ.

ನಿಗದಿತ ಊಟದ ಸಮಯವನ್ನು ಇಟ್ಟುಕೊಳ್ಳಿ. ಬೆಳಿಗ್ಗೆ ಮತ್ತು ಸಂಜೆ ಆಹಾರವನ್ನು ಸೇವಿಸಲು ಅದರದ್ದೇ ಆದ ನಿಯಮವಿದೆ. ಒಂದು ಹೊತ್ತಿನ ಊಟವನ್ನು ಮಾತ್ರ ಸೇವಿಸುವವರನ್ನು ಯೋಗಿ ಎಂದು ಕರೆಯಲಾಗುತ್ತದೆ ಮತ್ತು ಎರಡು ಬಾರಿ ತಿನ್ನುವವರನ್ನು ಭೋಗಿ ಎಂದು ಕರೆಯಲಾಗುತ್ತದೆ. ಎರಡು ಹೊತ್ತು ಊಟ ಮಾಡುವವರು ಸಮಯಪಾಲನೆ ಮಾಡುವುದು ಅಗತ್ಯ.

ಯಾವಾಗಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ತಾಮ್ರದ ಲೋಟದಲ್ಲಿ ನೀರನ್ನು ಕುಡಿಯಿರಿ. ಮಳೆ ನೀರು ಕುಡಿಯಲು ಉತ್ತಮ, ನದಿ ನೀರು ಮಧ್ಯಮ ಮತ್ತು ಕುಡಿಯಲು ಸೂಕ್ತ, ಕೊಳದ ನೀರು ಕುಡಿಯಲು ಅಷ್ಟೊಂದು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ, ಅದನ್ನು ಫಿಲ್ಟರ್ ಮಾಡಿ ಕುಡಿಯುವುದು ಉತ್ತಮ. ಆಹಾರವನ್ನು ಯಾವಾಗಲೂ ಹಿತ್ತಾಳೆ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಸೇವಿಸಬೇಕು. ಬಾಳೆ ಎಲೆ ಅಥವಾ ಇನ್ನಾವುದೇ ಊಟಕ್ಕೆ ಸೂಕ್ತವಾದ ಎಲೆಯ ಮೇಲೆ ಇಟ್ಟು ಆಹಾರವನ್ನು ಸೇವಿಸಬಹುದು. ಕಬ್ಬಿಣ ಮತ್ತು ಕಂಚಿನ ಪಾತ್ರೆಗಳಲ್ಲಿ ತಿನ್ನುವುದನ್ನು ನಿಷೇಧಿಸಲಾಗಿದೆ.

ಸಾತ್ವಿಕ ಆಹಾರ ಸೇವಿಸಿ: ಒಳ್ಳೆಯ, ಶುದ್ಧ, ಸಾತ್ವಿಕ ಮತ್ತು ಸಂಪೂರ್ಣ ಆಹಾರವನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಮೊಸರು, ಸಲಾಡ್, ದಾಳಿಂಬೆ, ಹಸಿರು ಎಲೆಗಳ ತರಕಾರಿಗಳು, ಬೆಳ್ಳುಳ್ಳಿ, ಬೀನ್ಸ್, ಹಣ್ಣುಗಳು ಮತ್ತು ಒಣ ಆಹಾರವನ್ನು ಬಳಸಿ. ನಿಮ್ಮ ಜೀವನದುದ್ದಕ್ಕೂ ಚಹಾ, ಕಾಫಿ, ತಂಪು ಪಾನೀಯಗಳು, ಮೈದಾ ಮತ್ತು ಅಂತಹ ಯಾವುದೇ ಪಾನೀಯಗಳನ್ನು ತ್ಯಜಿಸಿ. ಭಾರವಾದ ಆಹಾರವನ್ನು ಎಂದಿಗೂ ಸೇವಿಸಬೇಡಿ. ತುಂಬಾ ಮಸಾಲೆಯುಕ್ತ ಅಥವಾ ತುಂಬಾ ಸಿಹಿಯಾದ ಆಹಾರವನ್ನು ಸೇವಿಸಬೇಡಿ. ಯಾರೂ ಬಿಟ್ಟ ಆಹಾರವನ್ನು ತಿನ್ನಬೇಡಿ. ಅರ್ಧ ತಿಂದ ಹಣ್ಣು, ಸಿಹಿ ಇತ್ಯಾದಿಗಳನ್ನು ಮತ್ತೆ ತಿನ್ನಬಾರದು.

ಊಟಕ್ಕೂ ಮುನ್ನ ಸಿಹಿ ತಿನ್ನಬೇಕು ಏಕೆ? -ಸಿಹಿ ತಿನಿಸುಗಳು ಜೀರ್ಣವಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ -ಹಾಗಾಗಿ ಸಿಹಿಯನ್ನು ಊಟಕ್ಕೂ ಮೊದಲೇ ಸ್ವೀಕರಿಸಿದಾಗ ಆಹಾರದ ಜತೆಗೆ ಜೀರ್ಣವಾಗುತ್ತದೆ -ಜೀರ್ಣಕ್ರಿಯೆಯನ್ನು ಹೊರತುಪಡಿಸಿದರೆ, ಊಟಕ್ಕೂ ಮುನ್ನ ಸಿಹಿ ತಿನ್ನುವುದರಿಂದ ನಿಮ್ಮ ನಾಲಿಗೆಗಳು ಆಹಾರವನ್ನು ಸ್ವೀಕರಿಸಲು ಸಿದ್ಧವಾಗುತ್ತವೆ -ಊಟದ ಕೊನೆಯಲ್ಲಿ ಸಿಹಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗಬಹುದು, ಉದರ ಬೇನೆ ಕೂಡ ಬರಬಹುದು -ಊಟದ ಅಂತ್ಯದಲ್ಲಿ ಸಿಹಿಯನ್ನು ತಿನ್ನುವುದರಿಂದ ವಾಯು ಸಮಸ್ಯೆ, ವಾಂತಿಯೂ ಕೂಡ ಆಗಬಹುದು

ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಊಟವನ್ನು ಯಾವಾಗಲೂ ತಟ್ಟೆಯಲ್ಲಿಟ್ಟುಕೊಳ್ಳಬೇಕು. ಸುಖಾಸನದಲ್ಲಿ ಮೆತ್ತನೆಯ ಆಸನದ ಮೇಲೆ ಕುಳಿತು ಆಹಾರವನ್ನು ಸೇವಿಸಬೇಕು. ನಿಂತುಕೊಂಡಾಗಲಿ,ಚಪ್ಪಲಿಗಳನ್ನು ಧರಿಸಿ ಮತ್ತು ತಲೆಯನ್ನು ಮುಚ್ಚಿಕೊಂಡು ಆಹಾರವನ್ನು ಸೇವಿಸಬಾರದು.

ಊಟಕ್ಕೂ ಮುನ್ನ ಹೀಗೆ ಮಾಡಿ 5 ಅಂಗಗಳನ್ನು (2 ಕೈ, 2 ಕಾಲು, ಬಾಯಿ) ತೊಳೆದ ಬಳಿಕವೇ ಆಹಾರವನ್ನು ಸೇವಿಸಿ.

ಜೀವನಶೈಲಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Thu, 5 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್