ಹಿಂದೂಗಳು ಹೌದು, ಆದರೆ ಅದಕ್ಕೂ ಮೊದಲು ನಾವು ಭಾರತೀಯರು: ಡಿಕೆ ಶಿವಕುಮಾರ್

|

Updated on: Jan 29, 2024 | 3:58 PM

ಬಿಜೆಪಿಯವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಮತ್ತು ಮಂಡ್ಯದಲ್ಲಿ ಅವರಿಗೆ ವೋಟ್ ಬೇಸ್ ಇಲ್ಲ, ಅದನ್ನು ಸೃಷ್ಟಿಸಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು. ನಾವು ಹಿಂದೂಗಳಲ್ವಾ, ಅವರು ಮಾತ್ರ ಹಿಂದೂಗಳಾ? ಎಂದು ಅವರು ಪ್ರಶ್ನಿಸಿದರು.

ಬೆಂಗಳೂರು: ಬೇರೆ ಬೇರೆ ಸಂಘಟನೆಗಳು ಸಹ ಮುಂದೆ ಬಂದು ಸರ್ಕಾರೀ ಸ್ಥಳಗಳಲ್ಲಿ ನಾವೂ ಬಾವುಟ ಹಾರಿಸ್ತೀವಿ ಅನುಮತಿ ಕೊಡಿ ಅಂತ ಕೇಳಿದರೆ, ಸಂವಿಧಾನ ಉಲ್ಲಂಘನೆಯಾಗುತ್ತಾ ಹೋಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೆರಗೋಡು ಹನುಮ ಬಾವುಟ ವಿವಾದಕ್ಕೆ (Keragodu Hanuma flag row) ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಬಿಜೆಪಿಯವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಮತ್ತು ಮಂಡ್ಯದಲ್ಲಿ ಅವರಿಗೆ ವೋಟ್ ಬೇಸ್ ಇಲ್ಲ, ಅದನ್ನು ಸೃಷ್ಟಿಸಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ನಾವು ಹಿಂದೂಗಳಲ್ವಾ, ಅವರು ಮಾತ್ರ ಹಿಂದೂಗಳಾ? ಎಲ್ಲಕ್ಕೂ ಮೊದಲು ನಾವು ಭಾರತೀಯರೆನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು. ದಲಿತ ಸಂಘರ್ಷ ಸಂಘಟನೆ, ಕೆಂಪೇಗೌಡ ಸಂಸ್ಥೆ-ಹೀಗೆ ಸುಮಾರು 25 ವಿವಿಧ ಸಂಘಟನೆಗಳು ದ್ವಜ ಹಾರಿಸಲು ಅನುಮತಿ ಕೇಳಿವೆಯಂತೆ ಎಂದು ಹೇಳಿದ ಶಿವಕುಮಾರ್, ವಿನಾಕಾರಣ ಅಶಾಂತಿ ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ