ಕಾನೂನುಬಾಹಿರವಾಗಿ ಸೈಟು ಖರೀದಿಸಿ ದಕ್ಕಿಸಿಕೊಳ್ಳುವುದು ಕೇವಲ ಸಿಎಂಗೆ ಮಾತ್ರ ಸಾಧ್ಯ: ಸಿಟಿ ರವಿ
ಸದನದಲ್ಲಿ ವಿರೋಧ ಪಕ್ಷದ ನಾಯಕರು ಮುಡಾ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿ ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುತ್ತರಾದರು, ಸದನದಿಂದ ಪಲಾಯನ ಮಾಡದ ಹೊರತು ಅವರ ಮುಂದೆ ಬೇರೆ ದಾರಿಯೇ ಉಳಿದಿರಲಿಲ್ಲ ಎಂದು ಸಿಟಿ ರವಿ ಗೇಲಿ ಮಾಡಿದರು.
ಬೆಂಗಳೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಸೈಟುಗಳನ್ನು ಪಡೆದು ಅವುಗಳನ್ನು ದಕ್ಕಿಸಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರ ಸಾಧ್ಯ, 2004 ರಲ್ಲಿ ₹ 5.92 ಲಕ್ಷಗಳಿಗೆ ಖರೀದಿಸಿದ ಜಮೀನಿಗೆ ಇವತ್ತು ₹ 62 ಕೋಟಿ ಕೊಡಿ ಅಂತ ಜನಸಾಮಾನ್ಯರು ಕೇಳಲಾದೀತೆ ಎಂದು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ
Published on: Aug 27, 2024 06:48 PM