‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ವಿಶೇಷ ಪೂಜೆ ಸಲ್ಲಿಸಿ ಬಾವನ ಮಾತು

Updated on: Jun 15, 2024 | 11:24 AM

ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ದರ್ಶನ್ ಬಾವ ಮಂಜುನಾಥ್ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಆ ಬಳಿಕ ಅವರು ಮಾತನಾಡಿದ್ದಾರೆ. ‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡಿ ದರ್ಶನ್​ ಕೋಪ ಮಾಡಿಕೊಳ್ಳುವ ಹಾಗೆ ಮಾಡಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಪವಿತ್ರಾ ಗೌಡ ಕಾರಣ ಅಂತಾ ನಾನು ಹೇಳಲ್ಲ. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಮುಕ್ತರಾಗಿ ಹೊರಬರಬೇಕು’ ಎಂದಿದ್ದಾರೆ ಅವರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಬಾವ ಮಂಜುನಾಥ್ ದುಃಖಕ್ಕೆ ಒಳಗಾಗಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ‘ಕೊಲೆ ಪ್ರಕರಣದಲ್ಲಿ ದರ್ಶನ್ (Darshan) ಬಂಧನ ಆಗಿರುವುದು ಬೇಸರವಾಗುತ್ತಿದೆ. ಸಂಪಾದನೆ ಮಾಡುತ್ತಿದ್ದ ಮುಕ್ಕಾಲು ಭಾಗ ಸಮಾಜ ಸೇವೆಗೆ ಬಳಸಿದ್ದಾರೆ. ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡಿ ದರ್ಶನ್​ ಕೋಪ ಮಾಡಿಕೊಳ್ಳುವ ಹಾಗೆ ಮಾಡಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಪವಿತ್ರಾ ಗೌಡ ಕಾರಣ ಅಂತಾ ನಾನು ಹೇಳಲ್ಲ. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಮುಕ್ತರಾಗಿ ಹೊರಬರಬೇಕು’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 15, 2024 10:40 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More