ದರ್ಶನ್ ಮೇಲಿನ ಅತಿರೇಕದ ಅಭಿಮಾನದಿಂದ ಜೈಲು ಸೇರಿದ ಆರೋಪಿಗಳಿಗೆ ಪಶ್ಚಾತ್ತಾಪ; ಯಾರಿಂದಲೂ ಸಿಗುತ್ತಿಲ್ಲ ಬೆಂಬಲ
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ, ವಿನಯ್, ಪವನ್ ಸೇರಿ ಹಲವರು ಅರೆಸ್ಟ್ ಆಗಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಎ7 ಆರೋಪಿ ಅನುಕುಮಾರ್ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದರ್ಶನ್ಗೆ ಉಪಕಾರ ಮಾಡಲು ಹೋದವರಿಗೆ ಸಂಕಷ್ಟ ಹೆಚ್ಚಿದೆ.
ನಟ ದರ್ಶನ್ (Darshan) ಅವರ ಮೇಲಿನ ಅತಿರೇಕದ ಅಭಿಮಾನದಿಂದ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ದಾರೆ. ದರ್ಶನ್ ಗ್ಯಾಂಗ್ ಈಗ ಜೈಲು ಸೇರಿದೆ. ದರ್ಶನ್ ಹೇಳಿದಂತೆ ನಡೆದುಕೊಂಡಿದ್ದರಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ಈಗ ಅವರೆಲ್ಲರಿಗೂ ಪಶ್ಚಾತಾಪ ಕಾಡುತ್ತಿದೆ. ಜೈಲು ಸೇರಿದವರಿಗೆ ಯಾಕಾದರೂ ಈ ಪ್ರಕರಣದಲ್ಲಿ ಸಿಲುಕಿದೆನೋ ಎಂದೆನಿಸುತ್ತಿದೆ. ಅನೇಕರಿಗೆ ಮನೆಯವರ ಸಹಾಯ ಕೂಡ ಸಿಗದೆ ಕಂಗಾಲಾಗಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ, ವಿನಯ್, ಪವನ್ ಸೇರಿ ಹಲವರು ಅರೆಸ್ಟ್ ಆಗಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಎ7 ಆರೋಪಿ ಅನುಕುಮಾರ್ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದು ಅನುಕುಮಾರ್ಗೆ ಸಾಕಷ್ಟು ನೋವು ತಂದಿದೆ. ದರ್ಶನ್ಗೆ ಉಪಕಾರ ಮಾಡಲು ಹೋದವರಿಗೆ ಸಂಕಷ್ಟ ಹೆಚ್ಚಿದೆ. ಬಾಸ್ ಎಂದು ಕಂಬಿ ಹಿಂದೆ ಸೇರಿದವರ ಕುಟುಂಬಗಳು ಕಣ್ಣೀರು ಹಾಕುತ್ತಿವೆ.
ಅತಿರೇಕದ ಅಭಿಮಾನದಿಂದ ಜೈಲು ಸೇರಿದ ಆರೋಪಿಗಳಲ್ಲಿ ಪಶ್ಚಾತ್ತಾಪ ಕಾಡುತ್ತಿದೆ. ಆರೋಪಿಗಳಿಗೆ ಮನೆಯವರಿಂದಲೂ ಬೆಂಬಲ ಸಿಗುತ್ತಿಲ್ಲ. ಕೆಲವು ಕುಟುಂಬದವರಿಗೆ ಮಗನೇ ಆಧಾರ ಆಗಿದ್ದ. ಈಗ ಅವನು ಜೈಲು ಸೇರಿರುವದರಿಂದ ಮನೆಯವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಯಾಕಾದರೂ ಅಭಿಮಾನ ಅಂತ ಓಡಾಡಿದ್ವೋ ಅನ್ನೋ ಬೇಸರ ಅವರನ್ನು ಕಾಡುತ್ತಿದೆ.
ಇದನ್ನೂ ಓದಿ: ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ರೇಣುಕಾ ಸ್ವಾಮಿ ಎಂಬ ಫಾರ್ಮಸಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ. ಈ ಕಾರಣಕ್ಕೆ ಆತನ ಕೊಲೆ ಆಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ ಎನ್ನಲಾಗಿದೆ. ಪ್ರಮುಖ ಸಾಕ್ಷಿಗಳು ಸಿಕ್ಕಿದ್ದರಿಂದಲೇ ದರ್ಶನ್ ಅರೆಸ್ಟ್ ಆಗಿದ್ದಾರೆ. ಅವರನ್ನು ಬಿಡಿಸಲು ಅನೇಕರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.