Video: ಆಟೋದಲ್ಲಿ ಬಾಲಕನಿಗೆ ಪಿಟ್ ಬುಲ್ ನಾಯಿ ಕಚ್ತಿದ್ರೆ ನೋಡಿ ನಗಾಡುತ್ತಾ ಕುಳಿತ ಮಾಲೀಕ

Updated on: Jul 21, 2025 | 11:20 AM

ಆಟೋದಲ್ಲಿ ಬಾಲಕನಿಗೆ ಪಿಟ್ ಬುಲ್ ನಾಯಿ ಕಚ್ಚುತ್ತಿದ್ದರೆ ಮಾಲೀಕ ಮಾತ್ರ ನೋಡಿ ನಗಾಡುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಮಾಲೀಕನ ಈ ಮನಸ್ಥಿತಿ ಕಂಡು ಎಲ್ಲರೂ ಕೆಂಡಾಮಂಡಲವಾಗಿದ್ದಾರೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಆಟೋದಲ್ಲಿ ಬಾಲಕನಿಗೆ ನಾಯಿ ಕಚ್ಚಿದ್ದು, ಅದರ ಮಾಲೀಕ ಉದ್ದೇಶಪೂರ್ವಕವಾಗಿಯೇ ನಾಯಿಯನ್ನು ಬಾಲಕನ ಮೇಲೆ ಹಾರಿಸಿದ್ದಾನೆ. ಬಾಲಕ ಭಯದಿಂದ ಅಳುತ್ತಿರುವುದನ್ನು ಕಾಣಬಹುದು.

ಮುಂಬೈ, ಜುಲೈ 21: ಆಟೋದಲ್ಲಿ ಬಾಲಕನಿಗೆ ಪಿಟ್ ಬುಲ್ ನಾಯಿ ಕಚ್ಚುತ್ತಿದ್ದರೆ ಮಾಲೀಕ ಮಾತ್ರ ನೋಡಿ ನಗಾಡುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಮಾಲೀಕನ ಈ ಮನಸ್ಥಿತಿ ಕಂಡು ಎಲ್ಲರೂ ಕೆಂಡಾಮಂಡಲವಾಗಿದ್ದಾರೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಆಟೋದಲ್ಲಿ ಬಾಲಕನಿಗೆ ನಾಯಿ ಕಚ್ಚಿದ್ದು, ಅದರ ಮಾಲೀಕ ಉದ್ದೇಶಪೂರ್ವಕವಾಗಿಯೇ ನಾಯಿಯನ್ನು ಬಾಲಕನ ಮೇಲೆ ಹಾರಿಸಿದ್ದಾನೆ. ಬಾಲಕ ಭಯದಿಂದ ಅಳುತ್ತಿರುವುದನ್ನು ಕಾಣಬಹುದು.

ನಾಯಿ ಬಾಲಕನ ಗಲ್ಲವನ್ನು ಕಚ್ಚಿತ್ತು. ಅದು ಬಾಲಕ ಬಟ್ಟೆಯನ್ನು ಕಚ್ಚಿ ಹಿಡಿದಿದ್ದರೂ ಬಾಲಕ ಹೇಗೋ ಆಟೋದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಬಾಲಕನ ತಂದೆ ನಾಯಿಯ ಮಾಲೀಕರಾದ ಮೊಹಮ್ಮದ್ ಸೊಹೈಲ್ ಹಸನ್ (43) ವಿರುದ್ಧ ದೂರು ದಾಖಲಿಸಿದ್ದಾರೆ.ನಿಲ್ಲಿಸಿದ್ದ ಆಟೋರಿಕ್ಷಾದೊಳಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಹಸನ್ ತನ್ನ ನಾಯಿಯನ್ನು ಬಿಟ್ಟು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ