AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಷಾಢ ಮಾಸದ ಕೊನೆಯ ಸೋಮವಾರ: ನಂದಿ ಬೆಟ್ಟದ ಪ್ರದಕ್ಷಿಣೆ ಹಾಕುತ್ತಿರುವ ಭಕ್ತಗಣ

ಆಷಾಢ ಮಾಸದ ಕೊನೆಯ ಸೋಮವಾರ: ನಂದಿ ಬೆಟ್ಟದ ಪ್ರದಕ್ಷಿಣೆ ಹಾಕುತ್ತಿರುವ ಭಕ್ತಗಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 21, 2025 | 10:36 AM

Share

ನಂದಿ ಹಿಲ್ಸ್ ಅಂದಾಕ್ಷಣ ಅದೊಂದು ಪಿಕ್ನಿಕ್ ಸ್ಪಾಟ್, ಪ್ರೇಮಿಗಳು ಭೇಟಿ ನೀಡುವ ಅಥವಾ ಯುವಕ-ಯುವತಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವ ಸ್ಥಳ ಅಂತ ಭಾವಿಸುವುದುಂಟು. ಆದರೆ ಬೆಟ್ಟ ಮತ್ತು ಭೋಗ ನಂದೀಶ್ವರ ದೇವಸ್ಥಾನ ಧಾರ್ಮಿಕ ಐತಿಹ್ಯವನ್ನು ಹೊಂದಿವೆ. ಲವ್ ಸ್ಪಾಟ್ ಅದು ಇತ್ತೀಚಿಗೆ ಆಗಿರಬಹುದು ಅದರೆ ದೇವಸ್ಥಾನ ಬಹಳ ಹಿಂದಿನದು ಅದರಂತೆ ಜನರ ನಂಬಿಕೆ ಕೂಡ ಶತಮಾನಗಳಷ್ಟು ಹಳೆಯದು.

ಚಿಕ್ಕಬಳ್ಳಾಪುರ, ಜುಲೈ 21: ಇವತ್ತು ಆಷಾಢ ಮಾಸದ ಕೊನೆಯ ಸೋಮವಾರ (last Monday). ಜಿಲ್ಲೆಯ ನಂದಿ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಕೂಡಿಬಂದಿದ್ದಾರೆ. ಬೆಟ್ಟದ ಬುಡಭಾಗದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನದಿಂದ ಆರಂಭಿಸಿ ಬೆಟ್ಟದ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋದು ಜನರ ನಂಬಿಕೆ. ಹಾಗಾಗೇ, ಇವತ್ತು ಬೆಳಗ್ಗೆಯಿಂದ ಭಕ್ತರು ನಂದಿಹಿಲ್ಸ್ ಪ್ರದಕ್ಷಿಣೆ ಹಾಕಲು ಶುರುಮಾಡಿದ್ದಾರೆ. ಎಲ್ಲ ವಯೋಮಾನದ ಜನ- ಮಹಿಳೆಯರು, ಯುವಕರು ಮತ್ತು ವಯಸ್ಕರು ಸಹ ಸುಮಾರು 18ಕಿಮೀ ಸುತ್ತಳತೆಯೆ ನಂದಿಬೆಟ್ಟದ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಯಾರಲ್ಲೂ ಆಯಾಸ ಬಳಲಿಕೆ ಅನ್ನೋದಿಲ್ಲ, ಎಲ್ಲರೂ ಭಕ್ತಿಭಾವ ಮತ್ತು ಲವಲವಿಕೆಯಿಂದ ನಡೆಯುತ್ತಿದ್ದಾರೆ.

ಇದನ್ನೂ ಓದಿ:   ಕಾರ್ಮಿಕರಿಗೆ ಗುಡ್ ನ್ಯೂಸ್: ಪ್ರೇಮಿಗಳ ಹಾಟ್​ ಸ್ಪಾಟ್​ ನಂದಿ ಬೆಟ್ಟಕ್ಕೂ ಭರ್ಜರಿ ಕೊಡುಗೆ : ಸಂಪುಟ ಸಭೆಯ ಮುಖ್ಯಾಂಶಗಳು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ