ನೂರಾರು ಹೆಚ್ಚುವರಿ ಬಸ್ ಬಿಟ್ಟರೂ ಸಾಲುತ್ತಿಲ್ಲ! ಬೆಂಗಳೂರಿಗೆ ಬರಲು ಜನರ ಪರದಾಟ

Updated on: Nov 04, 2024 | 8:08 AM

ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧೆಡೆ ತಮ್ಮ ಊರುಗಳಿಗೆ ತೆರಳಿದ್ದ ಲಕ್ಷಾಂತರ ಜನ ಬೆಂಗಳೂರಿಗೆ ವಾಪಸಾಗಲು ಪರದಾಡಿದರು. ಕೆಎಸ್​ಆರ್​ಟಿಸಿ ಹೆಚ್ಚುವರಿಯಾಗಿ ನೂರಾರು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದ್ದರೂ ಬಸ್​ ನಿಲ್ದಾಣಗಳಲ್ಲಿ, ಬಸ್​ಗಳಲ್ಲಿ ವಿಪರೀತ ಜನಜಂಗುಳಿ, ನೂಕುನುಗ್ಗಲು ಕಾಣಿಸಿತು.

ಬೆಂಗಳೂರು, ನವೆಂಬರ್ 4: ಸಾಲು ರಜೆಗಳನ್ನು ಮುಗಿಸಿ ಬೆಂಗಳೂರಿಗೆ ವಾಪಸಾಗಲು ಜನ ಮುಗಿಬಿದ್ದಿದ್ದರಿಂದ ಭಾನುವಾರ ಕೆಎಸ್​ಆರ್​ಟಿಸಿ ಬಸ್​ಗಳು ಬಹುತೇಕ ತುಂಬಿ ತುಳುಕಿದವು. ನೂರಾರು ಹೆಚ್ಚುವರಿ ವಿಶೇಷ ಬಸ್​ಗಳನ್ನು ಬಿಡಲಾಗಿದ್ದರೂ ಅವುಗಳೂ ವಿಪರೀತ ರಷ್ ಆಗಿದ್ದವು. ಬಸ್​​ಗಳನ್ನೇರಲು ಪ್ರಯಾಣಿಕರು ಮುಗಿಬೀಳುತ್ತಿರುವ ದೃಶ್ಯ ಅನೇಕ ಕಡೆ ಕಂಡುಬಂತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More