Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ
ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ. ಟ್ರಕ್ ಪಲ್ಟಿ ಹೊಡೆಯುತ್ತಿದ್ದಂತೆ, ಸ್ಥಳೀಯರು ಓಡಿ ಬಂದು ಯಾವುದೇ ಸರ್ಕಾರದ ನಿರ್ದೇಶನಗಳಿಗೆ ಕಾಯದೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ವ್ಯಾನ್ ಮೇಲೆ ಬಿದ್ದ ಕಬ್ಬುಗಳೆಲ್ಲವನ್ನು ಬದಿಗೆ ಹಾಕಿ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು ಅವರ ಪೋಷಕರು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶ, ಜನವರಿ 30: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ. ಟ್ರಕ್ ಪಲ್ಟಿ ಹೊಡೆಯುತ್ತಿದ್ದಂತೆ, ಸ್ಥಳೀಯರು ಓಡಿ ಬಂದು ಯಾವುದೇ ಸರ್ಕಾರದ ನಿರ್ದೇಶನಗಳಿಗೆ ಕಾಯದೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ವ್ಯಾನ್ ಮೇಲೆ ಬಿದ್ದ ಕಬ್ಬುಗಳೆಲ್ಲವನ್ನು ಬದಿಗೆ ಹಾಕಿ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು ಅವರ ಪೋಷಕರು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.