ಬ್ರ್ಯಾಂಡ್ ಬೆಂಗಳೂರು ಮಿನಿಸ್ಟ್ರು ಬಾಯಲ್ಲಿ ಮಾತ್ರ! ಬೆಂಗಳೂರು ನಗರದಲ್ಲಿ ಮಳೆಯಾದರೆ ವಾಹನ ಸವಾರರಿಗೆ ಅದು ದುಸ್ವಪ್ನ

|

Updated on: Sep 06, 2023 | 11:27 AM

ಬನ್ನೇರುಘಟ್ಟ ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ನಡೆಸುತ್ತಿರುವುದರಿಂದ ರೋಡು ಜಲಾವೃತ. ಬಿಡಬ್ಲ್ಯೂಎಸ್ ಎಸ್ ಬಿ ಕೆಲಸಕ್ಕಿಳಿದರೆ ಸಾಕು, ಆ ನಿರ್ದಿಷ್ಟ ಪ್ರದೇಶದ ರಸ್ತೆಗಳು ಎಕ್ಕುಟ್ಟಿ ಹೋದಂತೆಯೇ! ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜನ ಸಂಕಷ್ಟ ಅನುಭವಿಸಬೇಕು. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಇಟ್ಟುಕೊಂಡಿರುವ ಡಿಕೆ ಶಿವಕುಮಾರ್ ಜನರ ಸಮಸ್ಯೆಗಳನ್ನು ಬೇಗ ಅರ್ಥ ಮಾಡಿಕೊಳ್ಳಲಿ.

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು (Brand Bengaluru) ಅಂದ್ರೆ ಇದೇ ಸ್ವಾಮಿ! ಕೆಲ ಜನ ಕೇಳುತ್ತಿರುತ್ತಾರೆ, ಬ್ರ್ಯಾಂಡ್ ಬೆಂಗಳೂರು ಅಂದರೇನು, ಅದು ಹೇಗಿರುತ್ತೆ, ಕಣ್ಣಿಗೆ ಕಾಣುತ್ತಾ? ಅವರಿಗೆ ಉತ್ತರ ಇಲ್ಲಿದೆ. ಬ್ರ್ಯಾಂಡ್ ಬೆಂಗಳೂರು ಅಂದರೆ ಇದು, ನೋಡೋದಿಕ್ಕೆ ಹೀಗಿರುತ್ತೆ ಮತ್ತು ಕಣ್ಣಿಗೆ ನಿಚ್ಚಳವಾಗಿ ಕಾಣುತ್ತೆ! ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಉನ್ನರ ಮಟ್ಟದ ಸಭೆ (high-level meeting) ನಡೆಸಿ, ನಗರದ ಗಣ್ಯರನ್ನು, ಸೆಲಿಬ್ರಿಟಿಗಳನ್ನು (celebrities) ಕರೆದು ಕಾಫಿ-ತಿಂಡಿ ನೀಡಿದರೆ, ನಗರದ ಮೂಲಭೂತ ಸೌಕರ್ಯಗಳಲ್ಲಿ (Infrastructure) ಸುಧಾರಣೆ ಕಾಣದು ಮಾರಾಯ್ರೇ. ಸರ್ಕಾರ ಮತ್ತು ಅಧಿಕಾರಿಗಳು (ಇಲ್ಲಿ ಬಿಬಿಎಂಪಿ ಅಧಿಕಾರಿಗಳು) ಕಾರ್ಯಪ್ರವೃತ್ತರಾಗಬೇಕು. ನಗರದ ಇನ್ಪ್ರಾಸ್ಟ್ರಕ್ಚರ್ ಒಂದು ಹಂತಕ್ಕೆ ಬರೋವರೆಗೆ ವಿಶ್ರಮಿಸಬಾರದು. ಇಲ್ಲಿ ನೋಡಿ ಬನ್ನೇರುಘಟ್ಟ ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ನಡೆಸುತ್ತಿರುವುದರಿಂದ ರೋಡು ಜಲಾವೃತ. ಬಿಡಬ್ಲ್ಯೂಎಸ್ ಎಸ್ ಬಿ ಕೆಲಸಕ್ಕಿಳಿದರೆ ಸಾಕು, ಆ ನಿರ್ದಿಷ್ಟ ಪ್ರದೇಶದ ರಸ್ತೆಗಳು ಎಕ್ಕುಟ್ಟಿ ಹೋದಂತೆಯೇ! ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜನ ಸಂಕಷ್ಟ ಅನುಭವಿಸಬೇಕು. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಇಟ್ಟುಕೊಂಡಿರುವ ಡಿಕೆ ಶಿವಕುಮಾರ್ ಜನರ ಸಮಸ್ಯೆಗಳನ್ನು ಬೇಗ ಅರ್ಥ ಮಾಡಿಕೊಳ್ಳಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ