Brand Bangalore: ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕಾಗಿ ಆಗಸ್ಟ್ 17ರವರೆಗೂ ಸಲಹೆಗಳನ್ನು ನೀಡಬಹುದು -ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಕೇಂದ್ರದ ಹೆದ್ದಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಮಾಸ್ಟರ್ಪ್ಲಾನ್ ರೂಪಿಸಿಕೊಂಡು ಬರುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ಆಗಸ್ಟ್ 17ರವರೆಗೂ ಸಲಹೆ ಸೂಚನೆ ಸಲ್ಲಿಸಲು ಅವಧಿ ವಿಸ್ತರಣೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಬ್ರ್ಯಾಂಡ್ ಬೆಂಗಳೂರು (Brand Bangalore) ನಿರ್ಮಾಣದ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ಬಗ್ಗೆ ದೇಶ, ವಿದೇಶದಿಂದಲೂ ಸಲಹೆ ಬಂದಿದೆ. ಶಾಲಾ ಮಕ್ಕಳಿಂದ ಹಿಡಿದು ವಿದೇಶದಲ್ಲಿರುವವರೂ ಸಲಹೆ ನೀಡಿದ್ದಾರೆ. ಜನರ ಸಲಹೆ ಸೂಚನೆ ಅನ್ವಯ ಪ್ಲ್ಯಾನ್ ರೂಪಿಸಲು ಸಂಸ್ಥೆಗೆ ಹಸ್ತಾಂತರ ಮಾಡುತ್ತೇವೆ. ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣಕ್ಕೆ ಫ್ಲೈಓವರ್, ಸುರಂಗ ಮಾರ್ಗ ಅಗತ್ಯವಿದೆ. ಕೇಂದ್ರದ ಹೆದ್ದಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಮಾಸ್ಟರ್ಪ್ಲಾನ್ ರೂಪಿಸಿಕೊಂಡು ಬರುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ಸಂಚಾರ ನಿರ್ವಹಣೆ ಸಂಬಂಧ ಹಲವು ಸಂಸ್ಥೆಗಳಿಂದಲೂ ಸಲಹೆ ಸೂಚನೆ ಬಂದಿದೆ. ಆಗಸ್ಟ್ 17ರವರೆಗೂ ಸಲಹೆ ಸೂಚನೆ ಸಲ್ಲಿಸಲು (Suggestions) ಅವಧಿ ವಿಸ್ತರಣೆ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ (DCM DK Shivakumar) ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯುವುದಾಗಿ ಈಗಾಗಲೇ ತಿಳಿಸಿದ್ದೇವೆ. ಬೆಂಗಳೂರು ನಗರದಲ್ಲಿ ಕೋರ್ಟ್ ಆದೇಶದಂತೆ ಯಾವುದೇ ಫ್ಲೆಕ್ಸ್, ಬ್ಯಾನರ್ ಅಳವಡಿಸುವಂತಿಲ್ಲ. ಬೆಂಗಳೂರು ನಗರದ ಸೌಂದರ್ಯ ಕಾಪಾಡಲು ಫ್ಲೆಕ್ಸ್ ನಿಷೇಧಿಸುತ್ತಿದ್ದೇವೆ. ಸಿಎಂ, ಡಿಸಿಎಂ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರ ಫ್ಲೆಕ್ ಹಾಕುವಂತಿಲ್ಲ, ಸರ್ಕಾರಿ ಜಾಹೀರಾತು ಪ್ರಕಟಿಸುವ ಬಗ್ಗೆ ಶೀಘ್ರದಲ್ಲೇ ನಿಯಮ ರೂಪಿಸುತ್ತೇವೆ. ಫ್ಲೆಕ್ಸ್ ಹಾಕದಂತೆ ವೈಯಕ್ತಿಕವಾಗಿ ವಿನಮ್ರತೆಯಿಂದ ಮನವಿ ಮಾಡಿಕೊಳ್ಳುವೆ. ಧಾರ್ಮಿಕ, ರಾಜಕೀಯ, ಸಾಮಾಜಿಕ ಫ್ಲೆಕ್ಸ್ ಹಾಕದಂತೆಯೂ ಮನವಿ ಮಾಡುವೆ. ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಫ್ಲೆಕ್ಸ್, ಬ್ಯಾನರ್ ಹಾಕಿದವರ ವಿರುದ್ಧ ಕೇಸ್ ದಾಖಲಿಸಿ ಬಿಬಿಎಂಪಿ ಕ್ರಮ ಜರುಗಿಸುತ್ತದೆ ಎಂದು ಡಿಕೆಶಿ ಎಚ್ಚರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ