ಬಾಗಲಕೋಟೆ ಜೋಡೆತ್ತುಗಳ ಕಮಾಲ್.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ ಮಾಡಿ ದಾಖಲೆ
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ.ಗಿರಿಸಾಗರದ ಈ ಎತ್ತುಗಳು ಅಪರೂಪದ ಸಾಧನೆ ಮಾಡಿವೆ.ಗುಂಡಪ್ಪ ನೀರುಗ್ಗಿ ಮತ್ತು ಜಕ್ಕಪ್ಪ ನವಲಗನ್ ಎಂಬ ರೈತರಿಗೆ ಸೇರಿದ ಎತ್ತುಗಳಿಂದ ಈ ದಾಖಲೆ ನಿರ್ಮಾಣವಾಗಿದೆ.ಸಾಮಾನ್ಯವಾಗಿ ಒಂದು ಜೋಡೆತ್ತು ದಿನಕ್ಕೆ 4 ರಿಂದ 5 ಎಕರೆ ಮಾತ್ರ ಬಿತ್ತನೆ ಮಾಡುತ್ತವೆ. ಆದರೆ ಈ ಎತ್ತುಗಳು ಬೆಳಿಗ್ಗೆ 5 ಗಂಟೆಯಿಂದ ಸಂಜೆ 3 ಗಂಟೆವರೆಗೆ, ಅಂದರೆ 10 ತಾಸಿನಲ್ಲಿ 20 ಎಕರೆ ಬಿಳಿಜೋಳ ಬಿತ್ತನೆ ಮಾಡಿ ಟ್ರ್ಯಾಕ್ಟರ್ ಗೂ ಮೀರಿದ ವೇಗದಲ್ಲಿ ಕೆಲಸ ಮಾಡಿವೆ.
ಬಾಗಲಕೋಟೆ, (ಅಕ್ಟೋಬರ್ 03): ಮಾನವ ಸಂಪನ್ಮೂಲ ಹೆಚ್ಚಿದ್ದರೂ ವ್ಯವಸಾಯಕ್ಕೆ ಯಾಂತ್ರಿಕತೆಗೆ ಜೋತು ಬಿದ್ದ ಕಾರಣ, ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು, ವ್ಯವಸಾಯ ಮಾಡಲು ಎತ್ತುಗಳು ಸಿಗುತ್ತಿಲ್ಲ. ಹಿಂದಿನ ಕಾಲದಲ್ಲಿ ಮನಗೊಂದು ಜೋಡೆತ್ತುಗಳು ಇರುತ್ತಿದ್ದವು ಆದ್ರೆ, ಇದೀಗ ಟ್ರ್ಯಾಕ್ಟರ್ಗಳು ಬಂದ ಮೇಲೆ ಎತ್ತುಗಳು ಮಾಯವಾಗಿದ್ದು, ಟ್ರ್ಯಾಕ್ಟರ್ಗಳಿಂದ ವೇಗವಾಗಿ ಕೆಲಸ ಕಾರ್ಯಗಳು ಎಂದು ಎತ್ತುಗಳನ್ನು ಬಳಕೆ ಮಾಡುತ್ತಿಲ್ಲ. ಆದ್ರೆ, ಈ ಜೋಡೆತ್ತುಗಳು ಟ್ರ್ಯಾಕ್ಟರ್ ಗೂ ಮೀರಿದ ಸಹಾಯ ಮಾಡಿ ಹೊಸ ದಾಖಲೆ ಬರೆದಿವೆ. ಹೌದು….ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ.ಗಿರಿಸಾಗರದ ಈ ಎತ್ತುಗಳು ಅಪರೂಪದ ಸಾಧನೆ ಮಾಡಿವೆ.ಗುಂಡಪ್ಪ ನೀರುಗ್ಗಿ ಮತ್ತು ಜಕ್ಕಪ್ಪ ನವಲಗನ್ ಎಂಬ ರೈತರಿಗೆ ಸೇರಿದ ಎತ್ತುಗಳಿಂದ ಈ ದಾಖಲೆ ನಿರ್ಮಾಣವಾಗಿದೆ.ಸಾಮಾನ್ಯವಾಗಿ ಒಂದು ಜೋಡೆತ್ತು ದಿನಕ್ಕೆ 4 ರಿಂದ 5 ಎಕರೆ ಮಾತ್ರ ಬಿತ್ತನೆ ಮಾಡುತ್ತವೆ. ಆದರೆ ಈ ಎತ್ತುಗಳು ಬೆಳಿಗ್ಗೆ 5 ಗಂಟೆಯಿಂದ ಸಂಜೆ 3 ಗಂಟೆವರೆಗೆ, ಅಂದರೆ 10 ತಾಸಿನಲ್ಲಿ 20 ಎಕರೆ ಬಿಳಿಜೋಳ ಬಿತ್ತನೆ ಮಾಡಿ ಟ್ರ್ಯಾಕ್ಟರ್ ಗೂ ಮೀರಿದ ವೇಗದಲ್ಲಿ ಕೆಲಸ ಮಾಡಿವೆ.
