Jaggesh: ಭಾರತಿ ರೀತಿ ಇರುವ ಹುಡುಗಿಯನ್ನು ಮದುವೆ ಆಗ್ಬೇಕು ಅಂದುಕೊಂಡಿದ್ದ ಜಗ್ಗೇಶ್​

| Updated By: ಮದನ್​ ಕುಮಾರ್​

Updated on: Dec 08, 2022 | 11:29 AM

Padavi Poorva Teaser Launch: ಜಗ್ಗೇಶ್​ ಅವರು ‘ಪದವಿ ಪೂರ್ವ’ ಚಿತ್ರದ ಟೀಸರ್​ ರಿಲೀಸ್​ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅವರು ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡರು.

ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡಿರುವ ‘ಪದವಿ ಪೂರ್ವ’ (Padavi Poorva) ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಈ ಚಿತ್ರತಂಡಕ್ಕೆ ಜಗ್ಗೇಶ್​ (Jaggesh) ಅವರು ಬೆಂಬಲ ನೀಡಿದ್ದಾರೆ. ಟೀಸರ್​ ರಿಲೀಸ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅವರು ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡರು. ತಾವು ಹದಿಹರೆಯದ ವಯಸ್ಸಿನಲ್ಲಿ ಇದ್ದಾಗ ನಟಿ ಭಾರತಿ (Bharathi Vishnuvardhan) ರೀತಿ ಇರುವ ಹುಡುಗಿಯನ್ನು ಮದುವೆ ಆಗಬೇಕು ಎಂದುಕೊಂಡಿದ್ದನ್ನು ಈಗ ಜಗ್ಗೇಶ್​ ನೆನಪು ಮಾಡಿಕೊಂಡಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ‘ಪದವಿ ಪೂರ್ವ’ ಚಿತ್ರತಂಡಕ್ಕೆ ಜಗ್ಗೇಶ್​ ಶುಭ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:29 am, Thu, 8 December 22

Follow us on