Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು

Vishnuvardhan | Jaggesh: ವಿಷ್ಣುವರ್ಧನ್​ ಹೊಸ ಮನೆ ‘ವಲ್ಮೀಕ’ ಗೃಹ ಪ್ರವೇಶಕ್ಕೆ ಜಗ್ಗೇಶ್​ ಆಗಮಿಸಿದ್ದಾರೆ. ‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ’ ಎಂದು ಅವರು ಹೇಳಿದ್ದಾರೆ.

Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು
ಗೃಹ ಪ್ರವೇಶ ಸಮಾರಂಭದಲ್ಲಿ ಜಗ್ಗೇಶ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 27, 2022 | 4:19 PM

‘ಸಾಹಸ ಸಿಂಹ’ ವಿಷ್ಣುವರ್ಧನ್​ (Dr Vishnuvardhan) ಎಂದರೆ ಚಂದನವನದಲ್ಲಿ ಅನೇಕರಿಗೆ ಸ್ಫೂರ್ತಿ. ಇಂದು (ನ.27) ಅವರ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗಿದೆ. ಬೆಂಗಳೂರಿನ ಜಯನಗರದಲ್ಲಿ ಈ ಮನೆ ಇದೆ. ಇದಕ್ಕೆ (Vishnuvardhan New House) ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ. ಗೃಹ ಪ್ರವೇಶದ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ-ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿ ವಿಷ್ಣುವರ್ಧನ್​ ಅವರ ಕುಟುಂಬದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ನವರಸ ನಾಯಕ ಜಗ್ಗೇಶ್​ (Navarasa Nayaka Jaggesh) ಅವರು ವಿಷ್ಣುವರ್ಧನ್​ ಅವರನ್ನು ಸ್ಮರಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಜಯನಗರದಲ್ಲಿ ವಿಷ್ಣುವರ್ಧನ್​ ಮನೆ ಕಟ್ಟಿದಾಗ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದರ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ. ಅಲ್ಲದೇ, ಈಗ ಚಿತ್ರರಂಗದ ನಿರ್ಮಾಪಕರು ವಿಷ್ಣು ಅಳಿಯ ಅನಿರುದ್ಧ್​ ಅವರ ಪರ ನಿಲ್ಲಬೇಕು ಎಂದು ಜಗ್ಗೇಶ್​ ಹೇಳಿದ್ದಾರೆ.

‘ವಿಷ್ಣುವರ್ಧನ್​ ಅವರು ನಮಗೆಲ್ಲ ಹಿರಿಯರು. ನಮಗೆ ಶುಭ ಹಾರೈಸಿದವರು ಅವರು. ಈ ಮನೆಗೆ ಸಂಬಂಧ ಪಟ್ಟಂತೆ ಒಂದು ಬ್ಯೂಟಿಫುಲ್​ ಕಥೆ ಇದೆ’ ಎಂದು ಜಗ್ಗೇಶ್​ ಮಾತು ಆರಂಭಿಸಿದರು. ‘ಮೊದಲಿಗೆ ವಿಷ್ಣುವರ್ಧನ್​ ಅವರು ಇಲ್ಲೊಂದು ಮನೆ ಕಟ್ಟುತ್ತಾರೆ. ಆಗ ಪಕ್ಕದ ಸೈಟಿನ ವ್ಯಕ್ತಿ ಬಂದು, ಸರ್​ ನೀವು ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೀರಿ ಅಂತ ಹೇಳ್ತಾನೆ. ಆಗ ವಿಷ್ಣುವರ್ಧನ್​ ಗಾಬರಿಯಾದರು. ಆದರೆ ಪಕ್ಕದ ಸೈಟಿನವರು ಎಂಥ ಅದ್ಭುತ ವ್ಯಕ್ತಿ ಎಂದರೆ, ಪರವಾಗಿಲ್ಲ ಸರ್​ ಈ ಜಾಗ ಕೂಡ ನೀವೇ ಇಟ್ಕೊಳ್ಳಿ ಅಂತ ಕೊಟ್ಟರು. ಹಾಗಾಗಿ ಇಲ್ಲಿ ವಿಷ್ಣುವರ್ಧನ್​ ಅವರಿಗೆ ಡಬಲ್​ ಸೈಟ್​ ಸಿಕ್ಕಿತು’ ಎಂದಿದ್ದಾರೆ ಜಗ್ಗೇಶ್​.

‘ವಿಷ್ಣುವರ್ಧನ್​ ಅವರಿಗೆ ಇದು ಪ್ರಿಯವಾದ ಜಾಗ. ಪರಿಸರದಲ್ಲಿ ನಾನು ಇರುತ್ತೇನೆ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ. ವಿಷ್ಣುವರ್ಧನ್​ ಅವರ ಮನೆಯ ಮಹಡಿಯಿಂದ ನೋಡಿದರೆ ಮಲೆನಾಡಿನಲ್ಲಿ ಇದ್ದಂತಹ ಭಾವ ಮೂಡುತ್ತದೆ. ಶುದ್ಧವಾಗಿ ಬಾಳಿದವರಿಗೆ ಭಗವಂತ ಕೊಡುವ ಆಶೀರ್ವಾದ ಇದು. ಈ ಸಂದರ್ಭದಲ್ಲಿ ಆ ಸಿಂಹ ಇದ್ದಿದ್ದರೆ ಈ ಮನೆಯ ಒಂದೊಂದು ಜಾಗದಲ್ಲಿ ಹೆಂಗೆ ಘರ್ಜನೆ ಮಾಡುತ್ತಿತ್ತು ಎಂಬ ಪ್ರಶ್ನೆ ನನ್ನ ಮನದಲ್ಲಿ ಕಾಡಿತು’ ಎಂದು ಜಗ್ಗೇಶ್​ ಹೇಳಿದ್ದಾರೆ.

ಇದನ್ನೂ ಓದಿ
Image
ಸಿನಿಮಾ, ಟಿವಿ ಶೋಗೆ ಜಗ್ಗೇಶ್ ಪಡೆಯುವ ಸಂಬಳ ಎಷ್ಟು ಕೋಟಿ? ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡ ನಟ
Image
Jaggesh: ರಾಜ್ಯಸಭೆ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯರ ಬೃಂದಾವನ ದರ್ಶನ ಪಡೆದ ಜಗ್ಗೇಶ್​
Image
ರಸ್ತೆಯಲ್ಲಿ ನನ್ನ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು; ನೆನಪಿನ ಬುತ್ತಿ ತೆರೆದಿಟ್ಟ ಜಗ್ಗೇಶ್
Image
ಜಗ್ಗೇಶ್​ ಮನೆಗೆ ಬಂತು ಹೊಸ BMW ಕಾರು; ಅಚ್ಚರಿಯ ರೀತಿಯಲ್ಲಿ ಸಿಕ್ಕಿದೆ ಗುರು ರಾಯರ ಪ್ರತಿಮೆ

‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ. ನನಗೆ ಬಹಳ ಖುಷಿಯಾದ ದಿನ ಇದು. ಈ ಸಂದರ್ಭದಲ್ಲಿ ಕನ್ನಡದ ಎಲ್ಲ ನಿರ್ಮಾಪಕರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ತುಂಬ ವರ್ಷಗಳ ಕಾಲ ವಿಷ್ಣುವರ್ಧನ್​ ಅವರು ನಮ್ಮನ್ನೆಲ್ಲ ರಂಜಿಸಿದರು. ಅವರ ಅಳಿಯ ಅನಿರುದ್ಧ್​ ಎಂದರೆ ಮಗನ ಥರ. ಅವರ ಜೊತೆ ಮಾಧ್ಯಮ ಮತ್ತು ಚಿತ್ರರಂಗ ನಿಲ್ಲಬೇಕು ಎಂಬುದು ನನ್ನ ಶುಭ ಹಾರೈಕೆ’ ಎಂದು ಜಗ್ಗೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:19 pm, Sun, 27 November 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ