ರಸ್ತೆಯಲ್ಲಿ ನನ್ನ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು; ನೆನಪಿನ ಬುತ್ತಿ ತೆರೆದಿಟ್ಟ ಜಗ್ಗೇಶ್

ಜಗ್ಗೇಶ್​ ಅವರು ಇಂಜಿನಿಯರಿಂಗ್ ಓದಬೇಕು ಎಂಬುದು ಅವರ ತಂದೆಯ ಕನಸಾಗಿತ್ತು. ಆದರೆ, ಜಗ್ಗೇಶ್​ ನಟನೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದರು. ಇದರಿಂದ ಕುಪಿತಗೊಳ್ಳುತ್ತಿದ್ದ ಅವರ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು.

TV9kannada Web Team

| Edited By: Rajesh Duggumane

Jun 25, 2022 | 8:35 PM

ನಟ ಜಗ್ಗೇಶ್ ಅವರು (Jaggesh) ನಟನಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ಇತ್ತೀಚೆಗೆ ರಾಜ್ಯಸಭೆ ಸದಸ್ಯನಾಗಿಯೂ ಆಯ್ಕೆ ಆಗಿದ್ದಾರೆ. ಇದು ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ. ಜಗ್ಗೇಶ್ ಅವರು ಏಕಾಏಕಿ ಹೀರೋ ಆದವರಲ್ಲ. ಅವರ ಜೀವನದಲ್ಲಿ ಹಲವು ಏಳುಬೀಳುಗಳಿದ್ದವು. ಜಗ್ಗೇಶ್ ಅವರು ಟಿವಿ9 ಕನ್ನಡ ಏರ್ಪಡಿಸಿದ್ದ ಎಜುಕೇಷನ್​ ಎಕ್ಸ್​ಪೋದಲ್ಲಿ ಈ ಬಗ್ಗೆ ನೆನಪಿಸಿಕೊಂಡಿದ್ದಾರೆ. ಜಗ್ಗೇಶ್​ ಅವರು ಇಂಜಿನಿಯರಿಂಗ್ (Engineer) ಓದಬೇಕು ಎಂಬುದು ಅವರ ತಂದೆಯ ಕನಸಾಗಿತ್ತು. ಆದರೆ, ಜಗ್ಗೇಶ್​ ನಟನೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದರು. ಇದರಿಂದ ಕುಪಿತಗೊಳ್ಳುತ್ತಿದ್ದ ಅವರ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು.

ಇದನ್ನೂ ಓದಿ: ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ

ಯೋಗ ಎಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ದೇಹಕ್ಕೆ ಸಂಬಂಧಿಸಿದ್ದು ಎಂದ ಜಗ್ಗೇಶ್​

Follow us on

Click on your DTH Provider to Add TV9 Kannada