ಬರದ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಮೂಲದ ವ್ಯಾಪಾರಿಯೊಬ್ಬ ಭಾನುವಳ್ಳಿ ಗ್ರಾಮದ ರೈತರಿಂದ ಭತ್ತ ಖರೀದಿಸಿ 4.26 ಕೋಟಿ ರೂ. ನೀಡದೆ ವಂಚಿಸಿದ್ದಾನೆ ಎಂದು ಆರೋಪಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ವ್ಯಾಪಾರಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದು, ಹಣ ವಸೂಲಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದಾರೆ.
ದಾವಣಗೆರೆ, ಅಕ್ಟೋಬರ್ 06: ಬರದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಭತ್ತದ ವ್ಯಾಪಾರಿಯೋರ್ವ ಗಾಯದ ಮೇಲೆ ಬರೆ ಎಳೆದಿರುವ ಆರೋಪ ಕೇಳಿಬಂದಿದೆ. ಮಲೆಬೆನ್ನೂರು ಮೂಲದ ವ್ಯಾಪಾರಿ ರಮೇಶ್ ಎಂಬಾತ ಒಂದೇ ಗ್ರಾಮದ ರೈತರಿಗೆ 4 ಕೋಟಿ ಹಣ ಕೊಡದೆ ವಂಚನೆ ಮಾಡಿರುವುದಾಗಿ ದಾವಣಗೆರೆ ಡಿಸಿ ಕಚೇರಿ ಎದುರು ಹರಿಹರ ತಾಲೂಕಿನ ಭಾನುವಳ್ಳಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ರೈತರಿಂದ ಭತ್ತ ಖರೀದಿಸಿದ್ದ ವ್ಯಾಪಾರಿ ರಮೇಶ್, 4 ಕೋಟಿ 26 ಲಕ್ಷ ರೂ. ಹಣ ಕೊಡದೆ ಸತಾಯಿಸುತ್ತಿದ್ದಾನೆ. ಹತ್ತಾರು ಸಲ ಸುತ್ತಾಡಿದ್ರೂ ಹಣ ನೀಡುತ್ತಿಲ್ಲ ಎಂದು ರೈತರು ದೂರಿದ್ದಾರೆ. ವ್ಯಾಪಾರಿ ರಮೇಶ್ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದು, ಹಣ ವಸೂಲಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us