ಪಡಿಕ್ಕಲ್- ಕೊಹ್ಲಿ ಅಬ್ಬರದ ಬ್ಯಾಟಿಂಗ್​ಗೆ ಸುಲಭದ ತುತ್ತಾದ ರಾಜಸ್ಥಾನ್ ರಾಯಲ್ಸ್ ತಂಡ
ಪಡಿಕ್ಕಲ್- ಕೊಹ್ಲಿ ಅಬ್ಬರದ ಬ್ಯಾಟಿಂಗ್​ಗೆ ಸುಲಭದ ತುತ್ತಾದ ರಾಜಸ್ಥಾನ್ ರಾಯಲ್ಸ್ ತಂಡ

ಪಡಿಕ್ಕಲ್- ಕೊಹ್ಲಿ ಅಬ್ಬರದ ಬ್ಯಾಟಿಂಗ್​ಗೆ ಸುಲಭದ ತುತ್ತಾದ ರಾಜಸ್ಥಾನ್ ರಾಯಲ್ಸ್ ತಂಡ

|

Updated on: Apr 23, 2021 | 10:49 AM

ರಾಜಸ್ಥಾನ್ ರಾಯಲ್ಸ್ ತಂಡವು ಅಗ್ರ ಕ್ರಮಾಂಕದ ವೈಫಲ್ಯದ ಹೊರತಾಗಿಯೂ ಒಂಬತ್ತು ವಿಕೆಟ್‌ಗೆ 177 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಸತತ ಮೂರು ಪಂದ್ಯಗಳಲ್ಲಿ ಜಯಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು.

ಪಡಿಕ್ಕಲ್- ಕೊಹ್ಲಿ ಅಬ್ಬರದ ಬ್ಯಾಟಿಂಗ್​ಗೆ ಎದುರಾಡದೆ ಸೋಲೊಪ್ಪಿಕೊಂಡ ರಾಜಸ್ಥಾನ್: ದೇವದತ್ ಪಡಿಕ್ಕಲ್ ಅವರ ಮೊದಲ ಐಪಿಎಲ್ ಶತಕ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕದ ಆಧಾರದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿತು. ಅಬ್ಬರದ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ 17 ನೇ ಓವರ್‌ನಲ್ಲಿ 178 ರನ್ ಗಳಿಸುವ ಗುರಿಯನ್ನು ಸಾಧಿಸಿತು. ದೇವದತ್ ಪಡಿಕ್ಕಲ್ 101 ಮತ್ತು ವಿರಾಟ್ ಕೊಹ್ಲಿ 72 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮೊದಲು ಆರ್‌ಸಿಬಿ ಬೌಲರ್‌ಗಳು ರಾಜಸ್ಥಾನವನ್ನು ಒಂಬತ್ತು ವಿಕೆಟ್‌ಗೆ 177 ರನ್ ಗಳಿಗೆ ಕಟ್ಟಿಹಾಕಿದರು. ಶಿವಂ ದುಬೆ ಅವರು 46 ರನ್ ಗಳಿಸಿದ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 27 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಕೊನೆಯ ಓವರ್‌ನಲ್ಲಿ ಎರಡು ವಿಕೆಟ್‌ಗಳಿಂದ 47 ರನ್‌ಗಳಿಗೆ ಒಟ್ಟು ಮೂರು ವಿಕೆಟ್ ಪಡೆದರು. ಕೈಲ್ ಜಾಮಿಸನ್, ಕೇನ್ ರಿಚರ್ಡ್ಸನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.
(Padikkal and Virat kohli Power RCB Comprehensive 10 Wicket Win against RR in match 16 in ipl 2021)

Published on: Apr 23, 2021 10:48 AM