ನಾವು ಮನೆ ಬಿಟ್ಟು ಕೆಲಸ ಮಾಡ್ತಾ ಇದೀವಿ, ನಾವು ಸತ್ರೂ ಯಾರೂ ಕೇಳೋರೆ ಇಲ್ಲ! ಚಿತಾಗಾರದ ಸಿಬ್ಬಂದಿ ಹೋರಾಟದ ಎಚ್ಚರಿಕೆ

ಸಾಧು ಶ್ರೀನಾಥ್​
|

Updated on: Apr 23, 2021 | 1:14 PM

ನಾವು ಮನೆ ಬಿಟ್ಟು ಕೆಲಸ ಮಾಡ್ತಾ ಇದೀವಿ, ನಾವು ಸತ್ರೂ ಯಾರೂ ಕೇಳೋರೆ ಇಲ್ಲ! ಚಿತಾಗಾರದ ಸಿಬ್ಬಂದಿ ಹೋರಾಟದ ಎಚ್ಚರಿಕೆ ಹೆಣ ಸುಡೋಕು ಹೆಣಗಾಟ ಶುರು? ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ ಎಂದ ಚಿತಾಗಾರ ಸಿಬ್ಬಂದಿ! ಇನ್ನು ಮುಂದೆ ಮೃತದೇಹ ಸುಡೋದಕ್ಕು ಶುರುವಾಗಲಿದೆ ಹೆಣಗಾಟ ಅನ್ನೋದು ಕೇಳಿ ಬರ್ತಿದೆ. ಈ ಬಗ್ಗೆ ಮಾತನಾಡಿದ ಚಿತಾಗಾರದ ಸಿಬ್ಬಂದಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಹಲವು ಬೇಡಿಕೆ ಈಡೇರಿಸುವಂತೆ ಚಿತಾಗಾರ ಸಿಬ್ಬಂದಿಗಳು ಬೇಡಿಕೆಯನ್ನು ಬಿಬಿಎಂಪಿ ಮುಂದಿಟ್ಟಿದ್ದಾರೆ. ಬೇಡಿಕೆ‌ ಈಡೇರಿಸದಿದ್ದರೆ […]

ನಾವು ಮನೆ ಬಿಟ್ಟು ಕೆಲಸ ಮಾಡ್ತಾ ಇದೀವಿ, ನಾವು ಸತ್ರೂ ಯಾರೂ ಕೇಳೋರೆ ಇಲ್ಲ! ಚಿತಾಗಾರದ ಸಿಬ್ಬಂದಿ ಹೋರಾಟದ ಎಚ್ಚರಿಕೆ
ಹೆಣ ಸುಡೋಕು ಹೆಣಗಾಟ ಶುರು? ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ ಎಂದ ಚಿತಾಗಾರ ಸಿಬ್ಬಂದಿ! ಇನ್ನು ಮುಂದೆ ಮೃತದೇಹ ಸುಡೋದಕ್ಕು ಶುರುವಾಗಲಿದೆ ಹೆಣಗಾಟ ಅನ್ನೋದು ಕೇಳಿ ಬರ್ತಿದೆ. ಈ ಬಗ್ಗೆ ಮಾತನಾಡಿದ ಚಿತಾಗಾರದ ಸಿಬ್ಬಂದಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಹಲವು ಬೇಡಿಕೆ ಈಡೇರಿಸುವಂತೆ ಚಿತಾಗಾರ ಸಿಬ್ಬಂದಿಗಳು ಬೇಡಿಕೆಯನ್ನು ಬಿಬಿಎಂಪಿ ಮುಂದಿಟ್ಟಿದ್ದಾರೆ. ಬೇಡಿಕೆ‌ ಈಡೇರಿಸದಿದ್ದರೆ ಮೃತದೇಹ ದಹನ ಮಾಡದೇ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 15,244 ಜನರಿಗೆ ಕೊರೊನಾ ಸೋಂಕು ತಗುಲಿದ್ದು 68 ಮಂದಿ ಬಲಿಯಾಗಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ 7 ಚಿತಾಗಾರಗಳಲ್ಲಿ ನಿರಂತರವಾಗಿ ಶವ ಸಂಸ್ಕಾರ ಮಾಡಲಾಗುತ್ತಿದೆ. ರಾತ್ರಿ ಹಗಲು ಶವಗಳನ್ನು ವಿದ್ಯುತ್‌ ಚಿತಾಗಾರದಲ್ಲಿ ಸುಡಲಾಗುತ್ತಿದೆ. ಮೇಡಿ ಅಗ್ರಹಾರ ಚಿತಾಗಾರದಲ್ಲಿ ಹತ್ತಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಕ್ಯೂ ನಿಂತಿರುತ್ತವೆ. ಬನಶಂಕರಿಯ ಚಿತಾಗಾರದಲ್ಲಿ ಇದೇ ಪರಿಸ್ಥಿತಿ ಇಂದು ಕಂಡುಬರುತ್ತಿತ್ತು. ಮತ್ತೊಂದೆಡೆ ಸುಮ್ಮನಹಳ್ಳಿಯ ಚಿತಾಗಾರದಲ್ಲಿ ಪ್ರತಿದಿನ 30ಕ್ಕೂ ಹೆಚ್ಚು ಶವ ಸಂಸ್ಕಾರ ನಡೆಸಿದ್ರೂ ಕ್ಯೂ ಕಡಿಮೆಯಾಗುತ್ತಿಲ್ಲ. ಈ ನಡುವೆ ಹಲವು ಬೇಡಿಕೆ ಈಡೇರಿಸುವಂತೆ ಚಿತಾಗಾರ ಸಿಬ್ಬಂದಿಗಳ ಪಟ್ಟು ಹಿಡಿದಿದ್ದಾರೆ. ಬೇಡಿಕೆಯನ್ನು ಬಿಬಿಎಂಪಿ ಮುಂದಿಟ್ಟಿದ್ದಾರೆ.
(Crematorium workers threatening to go on strike in bengaluru if demands not fulfilled)