AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ದಾಳಿಯ ಈ ಭೀಕರ ವಿಡಿಯೋ ಎಂದಿಗೂ ಮರೆಯುವಂತಿಲ್ಲ: ಪ್ರವಾಸಿಗರನ್ನು ಸಾವಿನ ದವಡೆಗೆ ತಳ್ಳಿದ್ದು ಯಾರು?

ಪಹಲ್ಗಾಮ್ ದಾಳಿಯ ಈ ಭೀಕರ ವಿಡಿಯೋ ಎಂದಿಗೂ ಮರೆಯುವಂತಿಲ್ಲ: ಪ್ರವಾಸಿಗರನ್ನು ಸಾವಿನ ದವಡೆಗೆ ತಳ್ಳಿದ್ದು ಯಾರು?

ಅಕ್ಷಯ್​ ಪಲ್ಲಮಜಲು​​
|

Updated on: Apr 22, 2026 | 10:37 AM

Share

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಒಂದು ವರ್ಷ. ವೈರಲ್ ವಿಡಿಯೋದಲ್ಲಿ, ದಾಳಿ ವೇಳೆ ಆಪರೇಟರ್ 'ಅಲ್ಲಾ ಹು ಅಕ್ಬರ್' ಎಂದು ಜಪಿಸುತ್ತಾ, ಪ್ರವಾಸಿಗರನ್ನು ಗುಂಡಿನ ದಾಳಿ ನಡೆಯುತ್ತಿದ್ದ ದಿಕ್ಕಿಗೆ ತಳ್ಳಿದ ಆರೋಪ ಎದುರಿಸುತ್ತಿದ್ದಾರೆ. ಅವರ ಉದ್ದೇಶದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಭದ್ರತಾ ಲೋಪಗಳ ಬಗ್ಗೆಯೂ ಅನುಮಾನ ಹೆಚ್ಚಿಸಿದೆ.

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಗೆ ಇಂದು (ಏ.22) ಒಂದು ವರ್ಷ. ಈ ಘಟನೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಆದರೆ ಈ ಭೀಕರ ಘಟನೆ ನಡೆಯುದಕ್ಕೂ ಮುನ್ನ ಏನಾಗಿತ್ತು ಎಂಬ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿನ ‘ಆಪರೇಟರ್’ ವರ್ತನೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರವಾಸಿಗರು ಸಂಚರಿಸುತ್ತಿದ್ದ ವೇಳೆ ಹಠಾತ್ ಗುಂಡಿನ ದಾಳಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಆಪರೇಟರ್ ಒಬ್ಬರು “ಅಲ್ಲಾ ಹು ಅಕ್ಬರ್” ಎಂದು ಜಪಿಸುತ್ತಿರುವುದು ಕೇಳಿಸುತ್ತದೆ. ಆದರೆ, ಆತ ಆತಂಕಗೊಂಡ ಪ್ರವಾಸಿಗರನ್ನು ರಕ್ಷಿಸುವ ಬದಲು, ಗುಂಡಿನ ದಾಳಿ ನಡೆಯುತ್ತಿದ್ದ ದಿಕ್ಕಿನತ್ತಲೇ ಅವರನ್ನು ತಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಬಳಕೆದಾರರು ಆಪರೇಟರ್‌ನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದರೂ ಆಪರೇಟರ್ ಪ್ರವಾಸಿಗರನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವ ಬದಲು ಫೈರಿಂಗ್ ಜೋನ್ ಕಡೆಗೆ ಏಕೆ ಸಾಗಿಸಿದ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.  ಇದೀಗ ಈ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us