Loading video

Pahalgam Terror Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಉಗ್ರರ ದಾಳಿ ಭೀಕರ ದೃಶ್ಯ ಸೆರೆ

Updated on: Apr 28, 2025 | 7:50 PM

ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೋ ಸಿಕ್ಕಿದೆ.​ ಗುಜರಾತ್ ನ ಅಹ್ಮದಾಬಾದ್ ನಿವಾಸಿಯೊಬ್ಬರು ಅಂದು ಪಹಲ್ಗಾಮ್ ಗೆ ಆಗಮಿಸಿದ್ದರು. ಈ ವೇಳೆ ರೋಪ್ ಕ್ರಾಸಿಂಗ್ ಮಾಡುವ ವೇಳೆ ಅವರು ಸೆಲ್ಫಿ ಕ್ಯಾಮೆರಾದಲ್ಲಿ ರೋಚಕ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆದರೆ ಅದೇ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯಕೂಡ ಸೇರಿಯಾಗಿದೆ.

ಶ್ರೀನಗರ, (ಏಪ್ರಿಲ್ 28):  ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ (Pahalgam terrorist attack) ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನ ಪಹಲ್ಗಾಮ್ ​ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿಡಿಯೋ ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದೇ ರೆಕಾರ್ಡ್ ಆಗಿದೆ. ಗುಜರಾತ್ ನ ಅಹ್ಮದಾಬಾದ್ ನಿವಾಸಿಯೊಬ್ಬರು ಅಂದು ಪಹಲ್ಗಾಮ್ ಗೆ ಆಗಮಿಸಿದ್ದರು. ಈ ವೇಳೆ ರೋಪ್ ಕ್ರಾಸಿಂಗ್ ಮಾಡುವ ವೇಳೆ ಅವರು ಸೆಲ್ಫಿ ಕ್ಯಾಮೆರಾದಲ್ಲಿ ರೋಚಕ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆದರೆ ಅದೇ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯಕೂಡ ಸೇರಿಯಾಗಿದೆ.

ಮೇಲೆ ರೋಪ್ ಕ್ರಾಸಿಂಗ್ ವೇಳೆ ವ್ಯಕ್ತಿ ಕ್ಯಾಮೆರಾ ಆನ್ ಮಾಡಿ ಹೋಗುತ್ತಿದ್ದಾಗ ಕೆಳಗೆ ಉಗ್ರರು ದಾಳಿ ಆರಂಭಿಸಿದ್ದಾರೆ. ಈ ವೇಳೆ ಗುಂಡಿನ ಸದ್ದು ಮೊಳಗುತ್ತಿದ್ದರೂ ರೋಪ್ ಕ್ರಾಸಿಂಗ್ ವೇಳೆ ಕಿರುಚುತ್ತಿದ್ದ ಪ್ರವಾಸಿಗನಿಗೆ ಅದು ಕೇಳಿಸಿಲ್ಲ. ಅದೇ ಸಂರ್ಭದಲ್ಲಿ ಕೆಳಗೆ ಗುಂಡಿನ ಶಬ್ಧದ ವೇಳೆ ಓರ್ವ ಪ್ರವಾಸಿಗ ಓಡುತ್ತಿರುತ್ತಾನೆ. ಈ ವೇಳೆ ಆತನನ್ನು ಬೆನ್ನಟ್ಟಿದ ಉಗ್ರ ಆತನ ತಲೆಗೆ ಗುಂಡು ಹಾರಿಸುತ್ತಾನೆ. ಕೂಡಲೇ ಆ ಪ್ರವಾಸಿಗ ಕುಸಿಯುತ್ತಾನೆ. ಆದರೆ ಇದಾವುದರ ಪರಿವೇ ಇಲ್ಲದೇ ಮೇಲೆ ಈ ವ್ಯಕ್ತಿ ರೋಪ್ ಕ್ರಾಸಿಂಗ್ ಮಾಡುತ್ತಾ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವುದು ಕಂಡುಬಂದಿದೆ. ರೋಪ್ ಕ್ರಾಸಿಂಗ್ ನ ಮುಕ್ತಾಯದ ಸಂದರ್ಭದಲ್ಲಿ ಏನೋ ಆಗುತ್ತಿದೆ ಎಂದು ಭಾವಿಸಿದ ಪ್ರವಾಸಿಗ ಆಗ ಕ್ಯಾಮೆರಾ ಆಫ್ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.