Video:ಆಪರೇಷನ್​ ಸಿಂಧೂರ್​, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ ಕಾಮಾಕ್ಷಿ

Updated on: May 08, 2025 | 12:01 PM

ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ ಎನ್ನುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು ಎಂದು ಆಪರೇಷನ್ ಸಿಂಧೂರ್​ ಬಗ್ಗೆ ಪಹಲ್ಗಾಮ್​ನಲ್ಲಿ ಇತ್ತೀಚೆಗೆ ನಡೆಸ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮಧುಸೂದನ್ ರಾವ್ ಪತ್ನಿ ಕಾಮಾಕ್ಷಿ ಪ್ರಸನ್ನ ಹೇಳಿದ್ದಾರೆ. ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಸಿಕ್ಕಂತಾಗಿದೆ. ನಾವು ನಮ್ಮ ಗಂಡಂದಿರಂನ್ನು ಕಳೆದುಕೊಂಡಿದ್ದೇವೆ.

ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ ಎನ್ನುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು ಎಂದು ಆಪರೇಷನ್ ಸಿಂಧೂರ್​ ಬಗ್ಗೆ ಪಹಲ್ಗಾಮ್​ನಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮಧುಸೂದನ್ ರಾವ್ ಪತ್ನಿ ಕಾಮಾಕ್ಷಿ ಪ್ರಸನ್ನ ಹೇಳಿದ್ದಾರೆ. ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಸಿಕ್ಕಂತಾಗಿದೆ. ನಾವು ನಮ್ಮ ಗಂಡಂದಿರಂನ್ನು ಕಳೆದುಕೊಂಡಿದ್ದೇವೆ. ಕಾರ್ಯಾಚರಣೆಯ ಹೆಸರೇ ಎಲ್ಲವನ್ನೂ ಹೇಳುತ್ತದೆ. ನಮ್ಮ ಪರವಾಗಿ ಸೇಡು ತೀರಿಸಿಕೊಂಡಿರುವ ಪ್ರಧಾನಿ ಮೋದಿಗೆ ನಾವು ಧನ್ಯವಾದ ತಿಳಿಸುತ್ತೇವೆ. ನಮ್ಮ ಕುಟುಂಬಗಳಿಗಾದ ನೋವು ಯಾರಿಗೂ ಆಗುವುದು ಬೇಡ ಎಂದು ಕಾಮಾಕ್ಷಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More