ಚೊಚ್ಚಲ ಸಿನಿಮಾದ ಮೂಲಕ 100 ಕೋಟಿ ಗಳಿಸಿದ ಜೋಡಿ ಮತ್ತೊಂದು ಸಿನಿಮಾದಲ್ಲಿ…?
ತಮ್ಮ ನಟನೆಯ ಮೂಲಕ ಚೊಚ್ಚಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದು, ಜೊತೆಗೆ ಅಳಿಸಿದ ನಟಿ ಕೃತಿ ಮತ್ತು ನಟ ವೈಷ್ಣವ್ ತೇಜ್ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನುವ ಸುದ್ದಿ ಈಗ ಹೈದರಾಬಾದ್ ನ ಜೂಬಿಲಿಹಿಲ್ಸ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ...
ಸೌತ್ ಸಿನಿಮಾರಂಗದಲ್ಲಿ ಈ ವರ್ಷ ಕೊರೊನಾದ ನಡುವೆಯೂ ಬಿಡುಗಡೆಯಾಗಿ, ಜೊತೆಗೆ ಚೊಚ್ಚಲ ನಟರ ತಂಡ ಇದ್ದರೂ ಬಹಳಷ್ಟು ಗಮನ ಸೆಳೆದ ಸಿನಿಮಾ ‘ಉಪ್ಪೆನಾ’ ಬರೋಬ್ಬರಿ 100 ಕೋಟಿ ಗಳಿಸಿದ್ದು ಎಲ್ಲರಿಗೂ ಗೊತ್ತಿದೆ. ಜೊತೆಗೆ, ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಯಶ್ಸಸು ಕಂಡ ‘ಉಪ್ಪೆನಾ’ ಸಿನಿಮಾ ಕೇವಲ ತೆಲುಗು ಮಾತ್ರವಲ್ಲದೆ ಅನ್ಯ ಭಾಷೆಯ ಪ್ರೇಕ್ಷಕರನ್ನು ಬಹಳಷ್ಟು ರಂಜಿಸಿದೆ ಎನ್ನುವುದರಲ್ಲಿ ಎರಡನೆ ಮಾತೆ ಇಲ್ಲಾ. ಒಂದೊಳ್ಳೆಯ ನೀತಿ ಪಾಠ ಕಲಿಸುವ ಈ ಪ್ರೇಮಕತೆಯ ಇದೀಗ ಎಲ್ಲರ ಮನೆ ಮಾತಾಗಿದೆ.
ತಮ್ಮ ನಟನೆಯ ಮೂಲಕ ಚೊಚ್ಚಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದು, ಜೊತೆಗೆ ಅಳಿಸಿದ ನಟಿ ಕೃತಿ ಮತ್ತು ನಟ ವೈಷ್ಣವ್ ತೇಜ್ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನುವ ಸುದ್ದಿ ಈಗ ಹೈದರಾಬಾದ್ ನ ಜೂಬಿಲಿಹಿಲ್ಸ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ…
(pair that earned rs 100 crore in first film all set to pair in another cinema)