India-Pakistan War Updates; ಭಾರತೀಯ ಸೇನೆ ನಿಯಂತ್ರಿತ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದೆ: ಮಹಾದೇವಸ್ವಾಮಿ, ನಿವೃತ್ತ ಸೇನಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ

Updated on: May 09, 2025 | 4:32 PM

ಭಾರತೀಯ ಸೇನೆ ಇಂಥ ಸ್ಥಿತಿಯಲ್ಲೂ ವಿವೇಚನೆ ಪ್ರದರ್ಶಿಸುತ್ತಿದೆ, ಕೇವಲ ಉಗ್ರರ ತಾಣಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕ್ಷಿಪಣಿಗಳನ್ನು ಹಾರಿಸುತ್ತಿದೆ, ಯುದ್ಧದಲ್ಲೂ ಬದ್ಧತೆ ಮತ್ತು ಮಾನವೀಯತೆಯನ್ನು ನಮ್ಮ ಸೈನ್ಯ ಪ್ರದರ್ಶಿಸುತ್ತಿದೆ, ಅದರ ಬಗ್ಗೆ ಮಾತಾಡುವುದು ಬಹಳ ಖುಷಿ ಮತ್ತು ಹೆಮ್ಮೆಯನ್ನು ನೀಡುತ್ತಿದೆ ಎಂದು ನಿವೃತ್ತ ಸೇನಾಧಿಕಾರಿ ಮಹದೇವ ಸ್ವಾಮಿ ಹೇಳುತ್ತಾರೆ.

ಚಾಮರಾಜನಗರ, ಮೇ 9: ಭಾರತದ ಸೇನೆ ಪಾಕಿಸ್ತಾನದ ಮೇಲೆ ಕೈಗೊಂಡಿರುವ ಆಪರೇಷನ್ ಸಿಂಧೂರ ಕಾರ್ಯಾಚಣೆ ನಿವೃತ್ತ ಯೋಧರನ್ನು, ಅಧಿಕಾರಿಗಳನ್ನು ರೋಮಾಂಚನಕ್ಕೀಡು ಮಾಡಿದೆ. ಚಾಮರಾಜನಗರದ ಮಹಾದೇವ ಸ್ವಾಮಿ (Mahadeva Swamy, Ex Army Officer ) ಸೇನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದವರು. ಆಪರೇಷನ್ ಸಿಂಧೂರವನನ್ನು ಜಾರಿಗೆ ತಂದು ಭಾರತ ಸರ್ಕಾರ ಬಹಳ ಉತ್ತಮ ಕೆಲಸ ಮಾಡಿದೆ, ಅಮಾಯಕ ಮಹಿಳೆಯರ ಸಿಂಧೂರವನ್ನು ಅಳಿಸುವ ನೀಚ ಮತ್ತು ಅವಹೇಳನಕಾರಿ ಕೆಲಸವನ್ನು ಪಾಕಿಸ್ತಾನ ಬೆಂಬಲಿತ ಉಗ್ರರು ಮಾಡಿದ್ದಾರೆ, ಅವರಿಗೆ ತಕ್ಕ ಶಾಸ್ತಿಯಾಗಬೇಕಿತ್ತು, ಸೇನೆಗೆ 24 ವರ್ಷ ಸೇವೆಯನ್ನು ಸಲ್ಲಿಸಿರುವ ತನಗೆ ಪಾಕಿಸ್ತಾನದ ಕುಯುಕ್ತಿ ಚೆನ್ನಾಗಿ ಗೊತ್ತು, ಅದು ಮಂಡಿಯೂರುವವರೆಗೆ ಬಿಡಬಾರದು ಎಂದು ಹೇಳುತ್ತಾರೆ.

ಇದನ್ನೂ ಓದಿ:  ಆಪರೇಷನ್ ಸಿಂಧೂರ್​​ ಬೆನ್ನಲ್ಲೇ ಕರ್ನಾಟದ ಡ್ಯಾಂಗಳಲ್ಲಿ ಹೈ ಅಲರ್ಟ್: ಬಿಗಿ ಭದ್ರತೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.