India-Pakistan War Updates; ವಾಯು ಪ್ರದೇಶವನ್ನು ಬಂದ್ ಮಾಡದ ಪಾಕಿಸ್ತಾನ ರಕ್ಷಣಾ ಕವಚವನ್ನಾಗಿ ಬಳಸಿದೆ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

Updated on: May 09, 2025 | 8:40 PM

ಲೇಹ್ ನಿಂದ ಸರ್ ಕ್ರೀಕ್ ವರೆಗಿನ ಭಾರತದ 36 ಭಾಗಗಳಲ್ಲಿ ಪಾಕಿಸ್ತಾನದ ಸೇನೆಯು 300 ರಿಂದ 400 ಡ್ರೋಣ್​ಗಳನ್ನು ಹಾರಿ ಬಿಟ್ಟು ವಾಯುಪ್ರದೇಶದ ಉಲ್ಲಂಘನೆ ಮಾಡಿದೆ, ಪಂಜಾಬ್ ರಾಜ್ಯದ ಭಟಿಂಡಾದಲ್ಲಿರುವ ಸೇನಾನೆಲೆ ಮೇಲೆ ದಾಳಿ ನಡೆಸುವ ವಿಫಲ ಯತ್ನವನ್ನು ಪಾಕಿಸ್ತಾನ ಮಾಡಿದೆ, ಅದರೆ ಪಾಕಿಸ್ತಾನದ ಎಲ್ಲ ಪ್ರಯತ್ನಗಳಿಗೆ ಭಾರತದ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವ್ಯೋಮಿಕಾ ಸಿಂಗ್ ಹೇಳಿದರು.

ದೆಹಲಿ, ಮೇ9: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ (Vikram Mistry) ಮತ್ತು ಲೆಫ್ಟಿನಂಟ್ ಕರ್ನಲ್ ಸೋಫಿಯಾ ಖುರೇಷಿ ಜೊತೆ ಆಪರೇಷನ್ ಸಿಂಧೂರ್ ಬಗ್ಗೆ ಅಪ್ಡೇಟ್ ಗಳನ್ನು ನೀಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಪಾಕಿಸ್ತಾನವು ಭಾರತದ ಆಯ್ದ ನಗರಗಳ ಮೇಲೆ ಅಪ್ರಚೋದಿತ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಆರಂಭಿಸಿದಾಗ್ಯೂ ಉದ್ದೇಶ ಪೂರ್ವಕವಾಗಿ ತನ್ನ ವಾಯುಪ್ರದೇಶವನ್ನು ಮುಚ್ಚಲಿಲ್ಲ ಎಂದು ಹೇಳಿದರು. ನಾಗರಿಕ ವಿಮಾನಗಳನ್ನು ಪಾಕಿಸ್ತಾನಿಗಳು ತಮ್ಮ ರಕ್ಷಣಾಕವಚ ಮತ್ತು ಗುರಾಣಿಗಳನ್ನಾಗಿ ಬಳಸಿಕೊಳುತ್ತಿದ್ದಾರೆ, ತನ್ನ ಈ ನಡೆಯಿಂದಾಗಿ ಭಾರತ ತಮ್ಮ ರಕ್ಷಣೆಗೋಸ್ಕರ ಪ್ರತಿದಾಳಿ ನಡೆಸಸಬಹುದೆಂಬ ಅರಿವಿದ್ದರೂ ಪಾಕಿಸ್ತಾನ ಕುಹುಕ ಬುದ್ಧಿಯನ್ನು ಬಿಡಲಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:  ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ ಖುರೇಶಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ