AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಟಿವಿ ಹೊಡೆದು ಹಾಕುವುದಕ್ಕೆ ಹೊಸ ಮಾರ್ಗ ಕಂಡುಕೊಂಡ ಪಾಕ್ ಫ್ಯಾನ್ಸ್

IND vs PAK: ಟಿವಿ ಹೊಡೆದು ಹಾಕುವುದಕ್ಕೆ ಹೊಸ ಮಾರ್ಗ ಕಂಡುಕೊಂಡ ಪಾಕ್ ಫ್ಯಾನ್ಸ್

ಪೃಥ್ವಿಶಂಕರ
|

Updated on:Feb 16, 2026 | 3:33 PM

Share

India vs Pakistan T20: ಕೊಲಂಬೊದಲ್ಲಿ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿ ಸೂಪರ್ 8 ತಲುಪಿದೆ. ಇದು ಭಾರತದ ಅಜೇಯ ಓಟವನ್ನು ಮುಂದುವರೆಸಿದೆ. ಈ ಹೀನಾಯ ಸೋಲಿನಿಂದ ಪಾಕ್ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದ್ದು, ಟಿವಿಗಳನ್ನು ಶೂಗಳಿಂದ ಹೊಡೆದು ಹಾಕುವ ಮೂಲಕ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ, ಬದ್ಧವೈರಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ 61 ರನ್‌ಗಳಿಂದ ಸೋಲಿಸಿ ತನ್ನ ಅಜೇಯ ಓಟವನ್ನು ಮುಂದುವರೆಸಿತು. ಈ ಗೆಲುವಿನೊಂದಿಗೆ ಸೂಪರ್ 8 ಸುತ್ತಿಗೆ ಟಿಕೆಟ್ ಪಡೆದುಕೊಂಡಿತು. ಇತ್ತ ಈ ಪಂದ್ಯದಲ್ಲಾದರೂ ಭಾರತವನ್ನು ಸೋಲಿಸಿ ಅಭಿಮಾನಿಗಳ ಮನಸಲ್ಲಿ ಹೀರೋಗಳಾಗಬೇಕು ಎಂದುಕೊಂಡಿದ್ದ ಪಾಕ್ ಆಟಗಾರರು ಹೀನಾಯ ಸೋಲಿನೊಂದಿಗೆ ಮತ್ತೆ ಕಳನಾಯಕರಾಗಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಪಾಕ್ ಅಭಿಮಾನಿಗಳ ಅಸಹನೆಯ ಕಟ್ಟೆ ಒಡೆದಿದೆ. ಭಾರತದ ವಿರುದ್ಧ ಪಾಕಿಸ್ತಾನ ಸೋತಾಗಲೆಲ್ಲ ಅಭಿಮಾನಿಗಳು ತಮ್ಮ ಕೋಪವನ್ನು ಟಿವಿಗಳ ಮೇಲೆ ತೋರಿಸುವುದು ಹೊಸದೇನೆಲ್ಲ. ಪಾಕ್ ಅಭಿಮಾನಿಗಳ ಇಂತಹ ಕೃತ್ಯವನ್ನು ಬಹಳ ವರ್ಷಗಳಿಂದಲೇ ನೋಡುತ್ತಿದ್ದೇವೆ. ಇದೀಗ ಅಭಿಮಾನಿಗಳು ಟಿವಿಗಳನ್ನು ಹೊಡೆದು ಹಾಕುವುದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅದೆನೆಂದರೆ ತಾವು ಧರಿಸಿದ್ದ ಶೂಗಳನ್ನು ಕಳಚಿ ಟಿವಿಗಳ ಮೇಲೆ ಎಸೆದು, ಶೂಗಳಿಂದ ಹಾಗೂ ಇಟ್ಟಿಗೆಗಳಿಂದ ಟಿವಿಯನ್ನು ಹೊಡೆದು ಹಾಕುವಷ್ಟರ ಮಟ್ಟಿಗೆ ಪಾಕ್ ಅಭಿಮಾನಿಗಳು ತಮ್ಮ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 175 ರನ್ ಕಲೆಹಾಕಿತು. ಟಿ20 ವಿಶ್ವಕಪ್​ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕಲೆಹಾಕಿದ ಅತ್ಯಧಿಕ ಸ್ಕೋರ್ ಇದಾಗಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ನಿರೀಕ್ಷೆಯಂತೆ ಭಾರತದ ಮಾರಕ ದಾಳಿಗೆ ತತ್ತಿರಿಸಿ ಬರೋಬ್ಬರಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 16, 2026 03:30 PM