ಬ್ಯಾಟ್ ಬೀಸಾಡಿ ಸಹ ಆಟಗಾರನೊಂದಿಗೆ ಜಗಳಕ್ಕಿಳಿದ ಪಾಕ್ ಕ್ರಿಕೆಟಿಗ; ವಿಡಿಯೋ ನೋಡಿ
Pakistan Shaheens vs Bangladesh A T20: ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ನಡೆದ ಪಾಕಿಸ್ತಾನ ಶಾಹೀನ್ಸ್ ಮತ್ತು ಬಾಂಗ್ಲಾದೇಶ ಎ ನಡುವಿನ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿತು. ಆದರೆ, ಪಂದ್ಯದ ವೇಳೆ ಖ್ವಾಜಾ ನಫೆ ಮತ್ತು ಯಾಸಿರ್ ಖಾನ್ ನಡುವೆ ನಡೆದ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಫೆ ರನ್ ಔಟ್ ಆದ ಬಳಿಕ ಯಾಸಿರ್ ಮೇಲೆ ಕೋಪ ತೋರಿಸಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ಪಾಕಿಸ್ತಾನ ಶಾಹೀನ್ಸ್ ಮತ್ತು ಬಾಂಗ್ಲಾದೇಶ ಎ ನಡುವೆ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಖ್ವಾಜಾ ನಫೆ ಮತ್ತು ಯಾಸಿರ್ ಖಾನ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 67 ಎಸೆತಗಳಲ್ಲಿ 118 ರನ್ ಕಲೆಹಾಕಿದರು. ಆದಾಗ್ಯೂ ಸಂವಹನದ ಕೊರತೆಯಿಂದಾಗಿ ಇನ್ನಿಂಗ್ಸ್ನ 12ನೇ ಓವರ್ನಲ್ಲಿ ಈ ಜೋಡಿ ಬೇರ್ಪಡಬೇಕಾಯಿತು. ಆದರೆ ವಿಕೆಟ್ ಕಳೆದುಕೊಂಡ ಹತಾಶೆಯಲ್ಲಿ ಪಾಕಿಸ್ತಾನ ತಂಡದ ಆಟಗಾರ ತನ್ನ ಸಹ ಆಟಗಾರನ ಜೊತೆ ಮೈದಾನದಲ್ಲೇ ಜಗಳಕ್ಕಿಳಿದ ಪ್ರಸಂಗವೂ ನಡೆಯಿತು. ಇದೀಗ ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಾಸ್ತವವಾಗಿ 12ನೇ ಮೊದಲ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ಯಾಸಿರ್ ಖಾನ್ ಚೆಂಡನ್ನು ಲೆಗ್ ಸೈಡ್‌ಗೆ ಫ್ಲಿಕ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಪ್ಯಾಡ್‌ಗೆ ಬಡಿದು ಪಿಚ್‌ನಲ್ಲಿ ಉರುಳಿತು. ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ಖವಾಜಾ ನಫೆ ತಕ್ಷಣವೇ ಸಿಂಗಲ್‌ಗಾಗಿ ಓಡಲು ಪ್ರಾರಂಭಿಸಿದರು. ಆದರೆ ಯಾಸಿರ್ ಮಾತ್ರ ರನ್ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಆದರೆ ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ನಫೆ ಅಷ್ಟರಲ್ಲಾಗಲೇ ಅರ್ಧ ಕ್ರಿಸ್ ತಲುಪಿದ್ದರು. ಇತ್ತ ಬಾಂಗ್ಲಾದೇಶದ ವಿಕೆಟ್ ಕೀಪರ್ ಚೆಂಡನ್ನು ನಾನ್ ಸ್ಟ್ರೈಕ್ ಕಡೆಗೆ ಎಸೆದರು. ಹೀಗಾಗಿ ನಫೆ ರನೌಟ್ಗೆ ಬಲಿಯಾದರು. ರನ್ ಔಟ್ ಆದ ಬಳಿಕ ಅಸಮಾಧಾನಗೊಂಡ ನಫೆ ಹತಾಶೆಯಿಂದ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ಹೊಡೆದರು. ಇದರ ನಂತರ, ಅವರು ಯಾಸಿರ್ ಕಡೆಗೆ ತಿರುಗಿ ತಮ್ಮ ಕೋಪವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು.
ಆದಾಗ್ಯೂ ಮುಂದಿನ ಓವರ್‌ನಲ್ಲಿಯೇ ಯಾಸಿರ್ ಕೂಡ ಔಟಾದರು. ಯಾಸಿರ್ ಖಾನ್ 40 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 62 ರನ್ ಗಳಿಸಿದರೆ, ಖವಾಜಾ ನಫೆ 31 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 61 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ, ಅಬ್ದುಲ್ ಸಮದ್ 27 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 1 ಬೌಂಡರಿಯೊಂದಿಗೆ ಅಜೇಯ 56 ರನ್ ಗಳಿಸಿದರು. ಈ ರೀತಿಯಾಗಿ, ಪಾಕಿಸ್ತಾನ್ ಶಾಹೀನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಇಡೀ ಬಾಂಗ್ಲಾದೇಶ ಎ ತಂಡವು 16.5 ಓವರ್‌ಗಳಲ್ಲಿ ಕೇವಲ 148 ರನ್‌ಗಳಿಸಿ ಆಲೌಟ್ ಆಯಿತು. ಈ ರೀತಿಯಾಗಿ, ಪಾಕಿಸ್ತಾನ್ ಶಾಹೀನ್ಸ್ 80 ರನ್‌ಗಳ ಅಂತರದಿಂದ ಅದ್ಭುತ ಜಯ ಸಾಧಿಸಿತು. ಬಾಂಗ್ಲಾ ಪರ ಸೈಫ್ ಹುಸೇನ್ 32 ಎಸೆತಗಳಲ್ಲಿ 57 ರನ್‌ಗಳಿಸಿದರೆ, ಆರಂಭಿಕ ಆಟಗಾರ ಜಿಸಾನ್ ಆಲಂ 17 ಎಸೆತಗಳಲ್ಲಿ 33 ರನ್‌ಗಳ ಇನ್ನಿಂಗ್ಸ್ ಆಡಿದರು. ಪಾಕಿಸ್ತಾನ ಪರ, ಶಾದ್ ಮಸೂದ್ ಮತ್ತು ಫೈಸಲ್ ಅಕ್ರಮ್ ತಲಾ 3 ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ವಾಸಿಮ್ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

