ಕೃಷಿ ಚಟುವಟಿಕೆಗೆ ತೊಡಕಾಗ್ತಿದೆ; ಜಲ ಒಪ್ಪಂದ ರದ್ದತಿಯ ಬಗ್ಗೆ ಪಾಕಿಸ್ತಾನಿ ರೈತರ ಕಳವಳ

Updated on: May 24, 2025 | 2:59 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಜಲ ಒಪ್ಪಂದದ ಅಡಿಯಲ್ಲಿ ಈ ನದಿಯ ನೀರನ್ನು ಪಾಕಿಸ್ತಾನಕ್ಕೆ ಬಿಡಲಾಗುತ್ತಿತ್ತು. ಆದರೆ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದೀಗ ನೀರನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ನೀರಿನ ಅಭಾವ ಉಂಟಾಗಿದ್ದು, ಜಲ ಒಪ್ಪಂದದ ರದ್ದತಿಯಿಂದ ಕೃಷಿ ಚಟುವಟಿಕೆಗೆ ತೊಡಕಾಗುತ್ತಿದೆ ಎಂದು ಅಲ್ಲಿನ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕ್‌ ಮೂಲದ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಯ ನಂತರ  ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಸಿಂಧೂ ಜಲ ಒಪ್ಪಂದವನ್ನು (Indus Water Treaty) ರದ್ದು ಮಾಡಿದೆ. ಭಾರತ ಮತ್ತು ಪಾಕಿಸ್ತಾನ (Pakistan) ನಡುವಿನ ಜಲ ಒಪ್ಪಂದದ ಅಡಿಯಲ್ಲಿ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಡಲಾಗುತ್ತಿತ್ತು. ಆದರೆ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ, ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿ, ಪಾಕಿಸ್ತಾನಕ್ಕೆ ನೀರು ಹರಿಸುವುದನ್ನೇ ನಿಲ್ಲಿಸಿದೆ. ಪಾಕಿಸ್ತಾನದ ಶೇ 92% ಭೂಮಿಗೆ ಶಾಶ್ವತ ನೀರಾವರಿ ವ್ಯವಸ್ಥೆಇಲ್ಲದ ಕಾರಣ ಇಲ್ಲಿನ ಆರ್ಥಿಕತೆಗೆ, ಕೃಷಿಗೆ ಸಿಂಧೂ ನದಿ ಏಕೈಕ ಆಧಾರವಾಗಿದೆ. ಆದರೆ ಇದೀಗ ಸಿಂಧೂ ಜಲ ಒಪ್ಪಂದ ರದ್ದತಿಯಿಂದ ಪಾಕಿಸ್ತಾನದಲ್ಲಿ ನೀರಿನ ಅಭಾವ ಉಂಟಾಗಿದ್ದು, ಜಲ ಒಪ್ಪಂದ ರದ್ದತಿಯಿಂದ ನಮಗೆ ಸರಿಯಾಗಿ ನೀರು ಸಿಗುತ್ತಿಲ್ಲ, ಇದರಿಂದ ಕೃಷಿ ಚಟುವಟಿಕೆಗೂ ತೊಡಕಾಗುತ್ತಿದೆ ಎಂದು ಪಾಕಿಸ್ತಾನಿ ರೈತರು (Pakistani farmers) ಕಳವಳ ವ್ಯಕ್ತಪಡಿಸಿದ್ದಾರೆ.

ಇದೀಗ ಪಾಕಿಸ್ತಾನವು ತಾಪಮಾನ ಹೆಚ್ಚಳ ಮತ್ತು ಬರಗಾಲದ ಸಮಸ್ಯೆಯನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆಯಿಂದ ಅಲ್ಲಿನ ಜಲ ಸಂಪನ್ಮೂಲಗಳು ಈಗಾಗಲೇ ಬರಿದಾಗುತ್ತಾ ಬಂದಿದೆ. ಈಗ ಭಾರತ ದೀರ್ಘಕಾಲ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದರೆ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳಬಹುದು ಎಂದು ಕೃಷಿಗೆ ಸಿಂಧೂ ನದಿ ನೀರನ್ನೇ ಅವಳಂಬಿಸಿರುವ ಪಾಕಿಸ್ತಾನಿ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ