ಅಯ್ಯೋ ವಿಧಿಯೇ, ಒಂದು ಕ್ಷಿಪಣಿಯನ್ನೂ ಇವರಿಗೆ ತಡೆಯಲು ಆಗಲಿಲ್ಲ: ಪಾಕಿಸ್ತಾನಿಗನ ಆಕ್ರೋಶದ ನುಡಿ

Updated on: May 08, 2025 | 12:42 PM

Pakistani man reacts on Operation Sindoor: ಭಾರತ ನಿನ್ನೆ ರಾತ್ರಿ 24 ಕ್ಷಿಪಣಿಗಳಿಂದ ದಾಳಿ ಮಾಡಿತು. ಎಲ್ಲಾ ಕ್ಷಿಪಣಿಗಳು ಗುರಿ ತಲುಪಿದ್ದು ಆಘಾತದ ವಿಚಾರ. ಭಾರತ ಇಟ್ಟ ಗುರಿ ಮುಟ್ಟಿದೆ. ಬೇಸರದ ಸಂಗತಿ ಎಂದರೆ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಂ ಒಂದೇ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ... ನುಗ್ಗಿ ಹೊಡೀತೀವಿ ಎಂದು ಭಾರತದವ್ರು ಹೇಳುತ್ತಿದ್ರು. ಹಾಗೇ ಹೊಡೆದಿದ್ದಾರೆ ಎಂದು ಪಾಕಿಸ್ತಾನದ ವ್ಯಕ್ತಿ ಹೇಳಿದ್ದಾರೆ.

ಮೇ 6ರ ತಡರಾತ್ರಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ (Operation Sindoor) ಕ್ಷಿಪಣಿಗಳ ದಾಳಿ ಮಾಡಿ ಪಾಕಿಸ್ತಾನದಲ್ಲಿನ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಯಿತು. ಈ ಘಟನೆ ಬಗ್ಗೆ ಪಾಕಿಸ್ತಾನೀ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವುದು ವೈರಲ್ ಆಗಿದೆ. ಆತನ ಮಾತುಗಳಿವು: ‘ಭಾರತ ನಿನ್ನೆ ರಾತ್ರಿ 24 ಕ್ಷಿಪಣಿಗಳಿಂದ ದಾಳಿ ಮಾಡಿತು. ಎಲ್ಲಾ ಕ್ಷಿಪಣಿಗಳು ಗುರಿ ತಲುಪಿದ್ದು ಆಘಾತದ ವಿಚಾರ. ಭಾರತ ಇಟ್ಟ ಗುರಿ ಮುಟ್ಟಿದೆ. ಬೇಸರದ ಸಂಗತಿ ಎಂದರೆ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಂ ಒಂದೇ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ… ನುಗ್ಗಿ ಹೊಡೀತೀವಿ ಎಂದು ಭಾರತದವ್ರು ಹೇಳುತ್ತಿದ್ರು. ಹಾಗೇ ಹೊಡೆದಿದ್ದಾರೆ. ನಾನೇನು ಭಾರತವನ್ನು ಹೊಗಳುತ್ತಿದ್ದೇನೆಂದು ಭಾವಿಸಬೇಡಿ. ವಾಸ್ತವ ಸಂಗತಿ ಇದು… ಇರಾನ್ ಸಾವಿರಾರು ಕ್ಷಿಪಣಿಗಳನ್ನು ಬಿಟ್ಟರೂ ಇಸ್ರೇಲ್ ಭಾಗದೊಳಗೆ ನುಗ್ಗಿದ್ದು ಕೆಲವೇ ಮಾತ್ರ. ಎಲ್ಲಾ ಕ್ಷಿಪಣಿಗಳನ್ನು ಇಸ್ರೇಲ್ ತಡೆಯಿತು… ಪಾಕಿಸ್ತಾನಕ್ಕೆ 24 ಕ್ಷಿಪಣಿಗಳನ್ನು ತಡೆಯಲು ಆಗಲಿಲ್ಲ… ಭಾರತದ ಜೆಟ್​​​ಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ವಿವಿಧ ಫೋಟೋಗಳು ಪ್ರತ್ಯಕ್ಷವಾದುವು. ಅದನ್ನು ಪರೀಕ್ಷಿಸಿದಾಗ ಫೇಕ್ ನ್ಯೂಸ್ ಅಂತ ಗೊತ್ತಾಯಿತು’.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More