Video: ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು? ಕಿರುಚುತ್ತಾ ಸೀಟ್ ಹತ್ತಿ ನಿಂತ ಮಹಿಳೆಯರು

Updated on: Jun 20, 2025 | 2:37 PM

ದೆಹಲಿ ಮೆಟ್ರೋದ ಮಹಿಳಾ ಬೋಗಿಯಲ್ಲಿ ನಡೆದ ಗದ್ದಲ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲರೂ ಹಾವು ಹಾವು ಎನ್ನುತ್ತಾ ಸೀಟ್ ಹತ್ತಿ ನಿಂತಿರುವ ಘಟನೆ ವರದಿಯಾಗಿದೆ. ಆದರೆ ವಿಡಿಯೋದಲ್ಲೆಲ್ಲೂ ಹಾವು ಕಂಡಿಲ್ಲ. ಭಯಭೀತರಾದ ಮಹಿಳೆಯರ ಗುಂಪೊಂದು ಕಿರುಚುತ್ತಾ, ಕಂಪಾರ್ಟ್‌ಮೆಂಟ್‌ನಲ್ಲಿರುವ ಸೀಟುಗಳ ಮೇಲೆ ಹಾರುತ್ತಿರುವುದನ್ನು ನೋಡಬಹುದು. ಯಾಣಿಕರು ಕೋಚ್ ಒಳಗೆ ಹಾವನ್ನು ನೋಡಿದ್ದಾರೆ ಎಂದು ಹೇಳಲಾಗಿದ್ದು, ಇದು ಅಸ್ತವ್ಯಸ್ತ ಪರಿಸ್ಥಿತಿಗೆ ಕಾರಣವಾಯಿತು.

ದೆಹಲಿ, ಜೂನ್ 20: ದೆಹಲಿ ಮೆಟ್ರೋದ ಮಹಿಳಾ ಬೋಗಿಯಲ್ಲಿ ನಡೆದ ಗದ್ದಲ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲರೂ ಹಾವು ಹಾವು ಎನ್ನುತ್ತಾ ಸೀಟ್ ಮೇಲೆ ಹತ್ತಿ ನಿಂತಿರುವ ಘಟನೆ ವರದಿಯಾಗಿದೆ. ಆದರೆ ವಿಡಿಯೋದಲ್ಲೆಲ್ಲೂ ಹಾವು ಕಂಡಿಲ್ಲ. ಭಯಭೀತರಾದ ಮಹಿಳೆಯರ ಗುಂಪೊಂದು ಕಿರುಚುತ್ತಾ, ಕಂಪಾರ್ಟ್‌ಮೆಂಟ್‌ನಲ್ಲಿರುವ ಸೀಟುಗಳ ಮೇಲೆ ಹಾರುತ್ತಿರುವುದನ್ನು ನೋಡಬಹುದು. ಯಾಣಿಕರು ಕೋಚ್ ಒಳಗೆ ಹಾವನ್ನು ನೋಡಿದ್ದಾರೆ ಎಂದು ಹೇಳಲಾಗಿದ್ದು, ಇದು ಅಸ್ತವ್ಯಸ್ತ ಪರಿಸ್ಥಿತಿಗೆ ಕಾರಣವಾಯಿತು. ದೆಹಲಿ ಮೆಟ್ರೋ ರೈಲು ನಿಗಮ (DMRC) ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. delhi.metrolife ಎಂಬ ಪ್ರೊಫೈಲ್ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ