Video: ಮನೆಯಲ್ಲಿ ಮಾತ್ರವಲ್ಲ ಶಾಲೆಯಲ್ಲೂ ನಿಮ್ಮ ಮಕ್ಕಳ ಮೇಲೆ ಇರಲಿ ಗಮನ, ಇಂಥಹ ಶಿಕ್ಷಕರು ಇರುತ್ತಾರೆ

Updated on: Sep 30, 2025 | 6:00 PM

ಮಕ್ಕಳ ಬಗ್ಗೆ ಪೋಷಕರು ತುಂಬಾ ಕಾಳಜಿಯನ್ನು ವಹಿಸಬೇಕು. ಅದು ಮನೆಯಲ್ಲಿ ಮಾತ್ರವಲ್ಲದೆ, ಶಾಲೆಗಳಲ್ಲೂ ಮಕ್ಕಳ ಮೇಲೆ ಕಣ್ಣಿಟ್ಟಿರಬೇಕು. ಏಕೆಂದರೆ ಮಕ್ಕಳ ಮೇಲೆ ಕೆಲವೊಂದು ಶಾಲೆಗಳಲ್ಲಿ ದೌರ್ಜನ್ಯ ನಡೆಯುತ್ತಿರುತ್ತದೆ. ಇಲ್ಲೊಂದು ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ಯಾವೆಲ್ಲ ರೀತಿ ಶಿಕ್ಷೆಯನ್ನು ನೀಡುತ್ತಾರೆ ಎಂಬುದನ್ನು ತೋರಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ಹೀಗೆಲ್ಲ ಹಿಂಸೆ ನೀಡುತ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ ನೋಡಿ.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಹಣ ಖರ್ಚು ಮಾಡಿ ದೊಡ್ಡ ಶಾಲೆಗಳಿಗೆ ಸೇರಿಸಿತ್ತೇವೆ. ಆದರೆ ಅಲ್ಲಿ ಮಕ್ಕಳ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ವಿಡಿಯೋ ನೋಡಿದ ಮೇಲೆ ತಿಳಿಯುತ್ತದೆ. ಮಕ್ಕಳನ್ನು ಶಾಲೆಯಲ್ಲಿ ಶಿಕ್ಷಕರ ಧೈರ್ಯದಲ್ಲಿ ಬಿಟ್ಟರೆ ಇಂತಹ ಸ್ಥಿತಿ ನೋಡಿ. ಇದು ಈ ಶಾಲೆಯೊಂದರ ಕಥೆಯಲ್ಲ, ಅನೇಕ ಇಂತಹ ಕೃತ್ಯವನ್ನು ಮಾಡುವ ಶಾಲೆಗಳು ಇವೆ. ಮಕ್ಕಳನ್ನು ನರ್ಸರಿ ಅಥವಾ ಇಂತಹ ಶಾಲೆಗಳಿಗೆ ದಾಖಲಿಸುವ ಮುನ್ನ ಒಮ್ಮೆ ಯೋಚನೆ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ಶಾಲೆಯೊಂದರಲ್ಲಿ ಮಕ್ಕಳನ್ನು ಕೂರ್ರವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ವೈರಲ್​​ ಆಗಿದೆ. ಮಕ್ಕಳನ್ನು ಕಿಟಕಿಗೆ ನೆತ್ತಾಡಿಸುವುದು. ಶಿಕ್ಷಕರು ಕಪಾಳಕ್ಕೆ ಹೊಡೆಯುವುದು, ಬಿಸಿಲಿನಲ್ಲಿ ಕೂರಿಸುವುದು ಹೀಗೆ ಅನೇಕ ಶಿಕ್ಷೆಯನ್ನು ನೀಡುವ ವಿಡಿಯೋವೊಂದು ವೈರಲ್​ ಆಗಿದೆ. ಈ ವಿಡಿಯೋ ಹರಿಯಾಣದ ಪಾಣಿಪತ್‌ ಶಾಲೆಯೊಂದರಲ್ಲಿ ನಡೆದ ಘಟನೆ ಎಂದು ಹೇಳುತ್ತಿದೆ. ಹೋಮ್​​ ವರ್ಕ್​ ಮಾಡಿಲ್ಲ ಎಂದು 7 ವರ್ಷದ ಬಾಲಕನನ್ನು ತಲೆ ಕೆಳಗೆ ಮಾಡಿ ಕಿಟಕಿಗೆ ನೇತುಹಾಕಲಾಗಿದೆ. ಇನ್ನೊಂದು ವಿಡಿಯೋದಲ್ಲಿ ಪ್ರಾಂಶುಪಾಲೆ ಮಕ್ಕಳಿಗೆ ನಿರ್ದಯವಾಗಿ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಇನ್ನು ಬಗ್ಗೆ ಪ್ರಾಂಶುಪಾಲೆಯನ್ನು ಪ್ರಶ್ನೆ ಮಾಡಿದ್ರೆ ಇದನ್ನು ನಾವು ಮಕ್ಕಳಿಗೆ ಶಿಸ್ತುಬದ್ಧರಾಗಿರಲು ಹೀಗೆ ಮಾಡುತ್ತಿದ್ದೇವೆ ಎಂದು ಪ್ರಾಂಶುಪಾಲೆ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ