ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ

| Updated By: ವಿವೇಕ ಬಿರಾದಾರ

Updated on: Oct 14, 2024 | 7:49 AM

ಚಿಕ್ಕಬಳ್ಳಾಪುರದಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ, ಪ್ರತಿಮೆ ಸುತ್ತಲೂ ಎತ್ತ ನೋಡಿದರೂ ಗಿರಿಧಾಮ. ಈ ಗಿರಿಧಾಮ ಸಾಲುಗಳನ್ನು ಹಕ್ಕಿಯಂತೆ ಆಕಾಶದಲ್ಲಿ ಹಾರಾಡುತ್ತಾ ನೋಡಿದರೆ ಆಗುವ ಸಂತೋಷವೇ ಬೇರೆ. ಹೌದು, ಚಿಕ್ಕಬಳ್ಳಾಪುರದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭವಾಗಿದೆ.

ಚಿಕ್ಕಬಳ್ಳಾಪುರ, ಅಕ್ಟೋಬರ್​ 14: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಗಿರಿಧಾಮದ ಮೇಲೆ ಖಾಸಗಿ ಸಂಸ್ಥೆಯೊಂದು ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ (Paragliding) ಆರಂಭಿಸಿದೆ. ಪ್ರವಾಸಿಗರು ಮುಗಿಬಿದ್ದು ಪ್ಯಾರಾಗ್ಲೈಂಡಿಂಗ್ ಮಾಡುತ್ತಿದ್ದಾರೆ. ಪ್ರತಿದಿನ ನಂದಿಗಿರಿಧಾಮದ ಮೇಲೆ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ.

ಪ್ರವಾಸಿಗರು ತಲಾ 3600 ರೂಪಾಯಿ ಫೀಸ್ ನೀಡಿ 10-15 ನಿಮಷಗಳ ಕಾಲ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಆಕಾಶದಿಂದ ಆದಿಯೋಗಿ ಪ್ರತಿಮೆ, ನಂದಿ ಗಿರಿಧಾಮ ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಪ್ರವಾಸಿಗರು ಆಕರ್ಷಣೆಗೆ

ಇದನ್ನೂ ಓದಿ: ಕರ್ನಾಟಕದ 20 ಸಾವಿರ ಹೆಕ್ಟೇರ್​ಗೂ ಹೆಚ್ಚಿನ ಅರಣ್ಯ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆ!

ಒಳಗಾಗುತ್ತಿದ್ದಾರೆ. ಪ್ರತಿದಿನ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರು ನಂದಿ ಗಿರಿಧಾಮಕ್ಕೆ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on