ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್; ಬ್ರೇಕ್ ಪಡೆಯೋ ನಿರ್ಧಾರ

ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್; ಬ್ರೇಕ್ ಪಡೆಯೋ ನಿರ್ಧಾರ

ರಾಜೇಶ್ ದುಗ್ಗುಮನೆ
|

Updated on: Oct 14, 2024 | 8:18 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂರನೇ ವಾರ ಆರಂಭ ಆಗಿದೆ. ಮೊದಲ ದಿನವೇ ಸ್ಪರ್ಧಿಗಳಿಗೆ ಶಾಕ್ ಎದುರಾಗಿದೆ. ಅಷ್ಟಕ್ಕೂ ಏನು ಆ ಶಾಕ್ ಎಂಬ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಲ್ಯಾಂಡ್​ಲೈನ್ ಇನ್​ಸ್ಟಾಲ್ ಮಾಡಲಾಗಿದೆ. ‘ಬಿಗ್ ಬಾಸ್’ ಈ ಫೋನ್ ಮೂಲಕ ಮಾತನಾಡುತ್ತಿದ್ದಾರೆ. ಇದು ಆಟದ ಒಂದು ಭಾಗ. ಈ ಮೊದಲ ಸೀಸನ್​ಗಳಲ್ಲೂ ಇದೇ ರೀತಿಯಲ್ಲಿ ಫೋನ್​ ಇನ್​ಸ್ಟಾಲ್ ಮಾಡಲಾಗಿತ್ತು. ಫೋನ್ ಮಾಡುತ್ತಿದ್ದಂತೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ‘ನಿಮ್ಮ ಉಡಾಫೆತನಕ್ಕೆ, ನಡುವಳಿಕೆಯಿಂದ ಬೇಸತ್ತು ಹೋಗಿದ್ದೇನೆ. ನಾನು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದು ಚಮಕ್ ಕೊಡೋಕೆ ಮಾಡಿರೋದು ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.