ಬಿಕೆ ಹರಿಪ್ರಸಾದ್ ಅಸಮಾಧಾನ ಶಮನಗೊಳಿಸಲು ಅವರ ಮನೆಗೆ ಹೋದ ಜಿ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ

|

Updated on: Sep 15, 2023 | 10:43 AM

ಮೂಲಗಳ ಪ್ರಕಾರ, ಹರಿಪ್ರಸಾದ್ ಅಸಮಾಧಾನವನ್ನು ಶಮನಗೊಳಿಸುವಂತೆ ಮತ್ತು ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಎಚ್ಚರದಿಂದ ಮಾತಾಡಲು ತಿಳಿಸುವಂತೆ ಹೈಕಮಾಂಡ್ ನಿಂದ ಇಬ್ಬರು ಸಚಿವರಿಗೆ ಸೂಚನೆ ಸಹ ಬಂದಿದೆ. ಹಾಗಾಗೇ, ಅವರು ಹರಿಪ್ರಸಾದ್ ಮನೆಗೆ ಆಗಮಿಸಿ ಅವರೊಂದಿಗೆ ಊಟ ಮಾಡುತ್ತಾ ಮಾತುಕತೆ ನಡೆಸಿದರು.

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆಂದು ಅವರ ವಿರುದ್ಧ ಈಗಾಗಲೇ ಹೈಕಮಾಂಡ್ ಗೆ ದೂರು ಸಲ್ಲಿಸಲಾಗಿದೆ ಮತ್ತು ದೆಹಲಿ ವರಿಷ್ಠರು ಪ್ರಸಾದ್ ಗೆ ತಾಕೀತು ಮಾಡಿಯೂ ಆಗಿದೆ. ಮೊನ್ನೆ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಈಡಿಗ ಸಮುದಾಯದ ಸಮಾವೇಶದಲ್ಲಿ ಅವರು ಗೃಹ ಸಚಿವ ಜಿ ಪರಮೇಶ್ವರ (G Parameshwara) ಹಾಗೂ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಬಗ್ಗೆಯೂ ಮಾತಾಡಿದ್ದರು. ಪ್ರಬುದ್ಧ ರಾಜಕಾರಣಿಗಳಾಗಿರುವ ಪರಮೇಶ್ವರ್ ಮತ್ತು ಜಾರಕಿಹೊಳಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸದೆ ಖುದ್ದು ಹರಿಪ್ರಸಾದ್ ಅವರ ಮನೆಗೆ ಬಂದು ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಹರಿಪ್ರಸಾದ್ ಅಸಮಾಧಾನವನ್ನು ಶಮನಗೊಳಿಸುವಂತೆ ಮತ್ತು ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಎಚ್ಚರದಿಂದ ಮಾತಾಡಲು ತಿಳಿಸುವಂತೆ ಹೈಕಮಾಂಡ್ ನಿಂದ ಇಬ್ಬರು ಸಚಿವರಿಗೆ ಸೂಚನೆ ಸಹ ಬಂದಿದೆ. ಹಾಗಾಗೇ, ಅವರು ಹರಿಪ್ರಸಾದ್ ಮನೆಗೆ ಆಗಮಿಸಿ ಅವರೊಂದಿಗೆ ಊಟ ಮಾಡುತ್ತಾ ಮಾತುಕತೆ ನಡೆಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ