ಗೋಕಾಕ್: ಗುರುವಾರ ಮಧ್ಯರಾತ್ರಿ ಅಮವಾಸ್ಯೆ ಹಿನ್ನೆಲೆ ಮನೆ ಮುಂದೆ ಭಯಾನಕ ಮಾಟಮಂತ್ರ!

ಗೋಕಾಕ್: ಗುರುವಾರ ಮಧ್ಯರಾತ್ರಿ ಅಮವಾಸ್ಯೆ ಹಿನ್ನೆಲೆ ಮನೆ ಮುಂದೆ ಭಯಾನಕ ಮಾಟಮಂತ್ರ!

Sahadev Mane
| Updated By: ಸಾಧು ಶ್ರೀನಾಥ್​

Updated on:Sep 15, 2023 | 9:41 AM

Gokak: ನಿನ್ನೆ ಗುರುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಭಯಾನಕ ಮಾಟಮಂತ್ರ ಮಾಡಿದ್ದಾರೆ. ಅಮವಾಸ್ಯೆ ಹಿನ್ನೆಲೆಯಲ್ಲಿ ಈ ಭಯಾನಕ ಮಾಟಮಂತ್ರ ನಡೆದಿದ್ದು, ಮನೆಯ ಮುಂದೆ ತಲೆ ಬುರುಡೆ, ನಿಂಬೆ ಹಣ್ಣು ಇಟ್ಟು ಮಾಟಮಂತ್ರ ಮಾಡಲಾಗಿದೆ.

ಬೆಳಗಾವಿ, ಸೆಪ್ಟೆಂಬರ್​ 15: ನಿನ್ನೆ ಗುರುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಭಯಾನಕ ಮಾಟಮಂತ್ರ (Black Magic) ಮಾಡಿದ್ದಾರೆ. ಅಮವಾಸ್ಯೆ (Amavasya) ಹಿನ್ನೆಲೆಯಲ್ಲಿ ಈ ಭಯಾನಕ ಮಾಟಮಂತ್ರ ನಡೆದಿದ್ದು, ಮನೆಯ ಮುಂದೆ ತಲೆ ಬುರುಡೆ, ನಿಂಬೆ ಹಣ್ಣು ಇಟ್ಟು ಮಾಟಮಂತ್ರ ಮಾಡಲಾಗಿದೆ. ಬಸವ್ವ ಚನ್ನಯ್ಯ ಮಠಪತಿ ಎನ್ನುವರ ಮನೆಯ ಮುಂದೆ ಮಾಟಮಂತ್ರ (Witchcraft) ನಡೆದಿದೆ. ಮನೆಯವರು ಇಂದು ಶುಕ್ರವಾರ ಬೆಳಗ್ಗೆ ಎದ್ದು ನೋಡಿದಾಗ ಮನೆಯ ಮುಂದೆ ತಲೆ ಬುರುಡೆ, ನಿಂಬೆಹಣ್ಣು, ಕುಂಕುಮ ವಸ್ತುಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ನಿಂಬೆಹಣ್ಣಿನ ಮೇಲೆ ಮನೆಯವರ ಹೆಸರುಗಳನ್ನ ಬರೆದಿದ್ದಾರೆ. ಈ ಮಾಟಮಂತ್ರಕ್ಕೆ ಮನೆಯವರು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ (Savalagi village in Gokak taluk in Belagavi).

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 15, 2023 09:37 AM