AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾಳೆ ಕಾಂಗ್ರೆಸ್​ ಪಕ್ಷಕ್ಕೆ ಯಾವ್ಯಾವ ನಾಯಕರು ಸೇರ್ಪಡೆ ಆಗ್ತಾರೆ ಗೊತ್ತಾ; ಡಿಕೆ ಸುರೇಶ್​ ಹೇಳಿದ್ದಿಷ್ಟು

Video: ನಾಳೆ ಕಾಂಗ್ರೆಸ್​ ಪಕ್ಷಕ್ಕೆ ಯಾವ್ಯಾವ ನಾಯಕರು ಸೇರ್ಪಡೆ ಆಗ್ತಾರೆ ಗೊತ್ತಾ; ಡಿಕೆ ಸುರೇಶ್​ ಹೇಳಿದ್ದಿಷ್ಟು

ಪ್ರಸನ್ನ ಗಾಂವ್ಕರ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 14, 2023 | 9:11 PM

ನಾವು ಯಾರ ಜೊತೆಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಸಂವಿಧಾನ, ಜಾತ್ಯತೀತ ತತ್ವಗಳ ಪರ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೆಲವರು ಅಧಿಕಾರಕ್ಕಾಗಿ ಎಲ್ಲ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅಂಥವರ ಬಗ್ಗೆ ನಾನು ಮಾತನಾಡುವ ಅವಶ್ಯಕತೆಯಿಲ್ಲ ಎಂದರು.

ಬೆಂಗಳೂರು, ಸೆ.14: ಜೆಡಿಎಸ್ ಪ್ರಮುಖ ನಾಯಕ ಕಬಡ್ಡಿ ಬಾಬು ಭೇಟಿ ಬಳಿಕ ಸಂಸದ ಡಿ.ಕೆ.ಸುರೇಶ್ (DK Suresh), ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳು ನಾಳೆ ಕಾಂಗ್ರೆಸ್ (Congress) ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ‘ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಬಲವರ್ಧನೆ ಕೆಲಸ ಮಾಡುತ್ತಿದ್ದೇವೆ. ಕಬಡ್ಡಿ ಬಾಬು, ಪುತ್ರ ಕಾಂಗ್ರೆಸ್ ಪಕ್ಷ ಸೇರಲು ಆಸಕ್ತಿ ತೋರಿಸಿದ್ದಾರೆ. ಬೆಂಗಳೂರು ದಕ್ಷಿಣ, ಪದ್ಮನಾಭನಗರ ಕ್ಷೇತ್ರದ ಹಲವರು ಪಕ್ಷ ಸೇರುತ್ತಾರೆ ಎಂದರು. ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಪಕ್ಷ ಸೇರುವುದಾಗಿ ಮುಂದೆ ಬಂದಿದ್ದಾರೆ. ಬಿಜೆಪಿ, ಜೆಡಿಎಸ್ ಒಂದಾಗುತ್ತಿರುವ ಬಗ್ಗೆ ಕೇಳಿದ್ದೇನೆ, ನಾವು ಯಾರ ಜೊತೆಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಸಂವಿಧಾನ, ಜಾತ್ಯತೀತ ತತ್ವಗಳ ಪರ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೆಲವರು ಅಧಿಕಾರಕ್ಕಾಗಿ ಎಲ್ಲ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅಂಥವರ ಬಗ್ಗೆ ನಾನು ಮಾತನಾಡುವ ಅವಶ್ಯಕತೆಯಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ