ಆಟೋಚಾಲಕರಿಗೆ ಖಾಸಗಿ ಸಾರಿಗೆ ಒಕ್ಕೂಟ ಕರೆದಿರುವ ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರೂ ಕಷ್ಟ!

|

Updated on: Sep 11, 2023 | 10:45 AM

ಪಾಪ, ಅವರ ಕಷ್ಟ ಏನೋ ಯಾರಿಗ್ಗೊತ್ತು? ಆಟೋರಿಕ್ಷಾ ಚಾಲಕರ ಬದುಕು ನಡೆಯಬೇಕಾದರೆ ಪ್ರತಿದಿನ ಆಟೋ ಓಡಿಸಲೇಬೇಕು. ಮಕ್ಕಳ ಫೀಸು, ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ದರೆ ಔಷಧಿ, ಚಿಕ್ಕಮಕ್ಕಳಿಗೆ ಹಾಲು-ಎಲ್ಲದಕ್ಕೂ ಚಾಲಕರ ದೈನಂದಿನ ಸಂಪಾದನೆಯೇ ಆಸರೆ. ಎದುರಾಗಿರುವ ಕಷ್ಟಕ್ಕಾಗಿ ಪ್ರತಿಭಟನೆ ಮಾಡಬೇಕು, ಪ್ರತಿಭಟನೆಗಿಳಿಯದಿದ್ದರೆ ಎದುರಾಗುವ ಕಷ್ಟ ಅನುಭವಿಸಬೇಕು.

ಬೆಂಗಳೂರು: ನಗರದಲ್ಲಿ ಇಂದು ಖಾಸಗಿ ಸಾರಿಗೆ ಒಕ್ಕೂಟವು (Karnataka State Private Transport Associations) ಶಕ್ತಿ ಯೋಜನೆ (Shakti Scheme) ಜಾರಿಗೊಳಿಸಿದಾಗಿನಿಂದ ತಮಗಾಗುತ್ತಿರುವ ನಷ್ಟ ಮತ್ತು ಸಮಸ್ಯೆಗಳನ್ನು ರಾಜ್ಯ ಸರ್ಕಾರದ (Siddaramaiah government) ಗಮನಕ್ಕೆ ತರಲು ಪ್ರತಿಭಟನೆಗೆ ಕರೆದಿರುವುದು ನಿನ್ನೆ ವರದಿಯಾಗಿದೆ. ಆಟೋ ರಿಕ್ಷಾ ಚಾಲಕರು, ಌಪ್ ಅಗ್ರಿಗೇಟ್ ಕ್ಯಾಬ್ ಗಳ ಮಾಲೀಕರು, ಖಾಸಗಿ ಬಸ್ ಗಳ ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಇಲ್ಲೊಬ್ಬ ಆಟೋ ಚಾಲಕ ಪ್ರತಿಭಟನೆ ಹೊರತಾಗಿಯೂ ತಮ್ಮ ವಾಹನದಲ್ಲಿ ಸವಾರಿ ಹಾಕಿಕೊಂಡು ಹೋಗುತ್ತಿರುವುದನನ್ನು ಕಂಡ ಪ್ರತಿಭಟನಾನಿರತರು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಪ, ಅವರ ಕಷ್ಟ ಏನೋ ಯಾರಿಗ್ಗೊತ್ತು? ಆಟೋರಿಕ್ಷಾ ಚಾಲಕರ ಬದುಕು ನಡೆಯಬೇಕಾದರೆ ಪ್ರತಿದಿನ ಆಟೋ ಓಡಿಸಲೇಬೇಕು. ಮಕ್ಕಳ ಫೀಸು, ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ದರೆ ಔಷಧಿ, ಚಿಕ್ಕಮಕ್ಕಳಿಗೆ ಹಾಲು-ಎಲ್ಲದಕ್ಕೂ ಚಾಲಕರ ದೈನಂದಿನ ಸಂಪಾದನೆಯೇ ಆಸರೆ. ಎದುರಾಗಿರುವ ಕಷ್ಟಕ್ಕಾಗಿ ಪ್ರತಿಭಟನೆ ಮಾಡಬೇಕು, ಪ್ರತಿಭಟನೆಗಿಳಿಯದಿದ್ದರೆ ಎದುರಾಗುವ ಕಷ್ಟ ಅನುಭವಿಸಬೇಕು. ಅಡಕತ್ತರಿಯಲ್ಲಿ ಸಿಕ್ಕಂಥ ಸ್ಥಿತಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ