ದಾವಣಗೆರೆಗೆ ಹೊರಟ ಸಿದ್ದರಾಮಯ್ಯರನ್ನು ತುಮಕೂರಿನಲ್ಲಿ ತಡೆದ ಕಾರ್ಯಕರ್ತರು ‘ಭಾವಿ ಮುಖ್ಯಮಂತ್ರಿಗೆ ಜೈ’ ಅಂದರು!

Edited By:

Updated on: Jul 22, 2022 | 11:51 AM

ಸಿದ್ದರಾಮಯ್ಯನವರನ್ನು ತುಮಕೂರಿನ ಡಿ ಎಮ್ ಪಾಳ್ಯ ಬಳಿ ತಡೆದ ಕಾರ್ಯಕರ್ತರು ಹೂಮಾಲೆ ಹಾಕಿ ಸಂಭ್ರಮಿಸುವುದರ ಜೊತೆಗೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮ್ಯನವರಿಗೆ ಜೈ ಅಂತ ಜೈಕಾರ ಮಾಡಿದರು.

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಹೋದೆಡೆಯೆಲ್ಲ ಕಾರ್ಯಕರ್ತರು (party workers) ಮತ್ತು ಅಭಿಮಾನಿಗಳು ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ ಅಂತ ಕೂಗುತ್ತಿದ್ದಾರೆ. ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದಾವಣಗೆರೆಗೆ ತೆರಳುತ್ತಿದ್ದ ಸಿದ್ದರಾಮಯ್ಯನವರನ್ನು ತುಮಕೂರಿನ ಡಿ ಎಮ್ ಪಾಳ್ಯ ಬಳಿ ತಡೆದ ಕಾರ್ಯಕರ್ತರು ಹೂಮಾಲೆ ಹಾಕಿ ಸಂಭ್ರಮಿಸುವುದರ ಜೊತೆಗೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮ್ಯನವರಿಗೆ ಜೈ ಅಂತ ಜೈಕಾರ ಮಾಡಿದರು. ವಿರೋಧ ಪಕ್ಷದ ನಾಯಕರೊಂದಿಗೆ ಶಾಸಕ ಜಮೀರ್ ಅಹ್ಮದ್ ಇದ್ದರು.