ಚಲುಸುತ್ತಿರುವಾಗ್ಲೇ ಕಳಚಿದ ಬಸ್ ಟೈರ್, ಅಬ್ಬಾ..ಬದುಕಿದೆವು ಎಂದು ನಿಟ್ಟುಸಿರು ಬಿಟ್ಟ ಪ್ರಯಾಣಿಕರು: ವಿಡಿಯೋ ವೈರಲ್
ಗದಗದಿಂದ ನರಗುಂದದ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್ ಚಲಿಸುತ್ತಿರುವಾಗಲೇ ಚಕ್ರ ಕಟ್ ಆಗಿದೆ. ಈ ಬಸ್ನಲ್ಲಿ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 50 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಗದಗ, (ಆಗಸ್ಟ್ 20): ಚಲಿಸುತ್ತಿರುವಾಗಲೇ ಏಕಾಏಕಿ ಬಸ್ನ ಚಕ್ರ ಕಟ್ ಆಗಿ ಬಿದ್ದಿದ್ದು, ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಗದಗದಿಂದ ನರಗುಂದದ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್ ಚಲಿಸುತ್ತಿರುವಾಗಲೇ ಚಕ್ರ ಕಟ್ ಆಗಿದೆ. ಈ ಬಸ್ನಲ್ಲಿ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 50 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ದಿಢೀರ್ ಬಿಚ್ಚಿಬಿದ್ದು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದದೆ. ಚಕ್ರ ಬಿಚ್ಚಿ ಉರುಳಿ ಹೋಗ್ತಿದ್ದಂತೆ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾನೆ. ಬಳಿಕ ಪ್ರಯಾಣಿಕರು ಅಬ್ಬಾ ಬದುಕಿದೆವು ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಬಸ್ ನ ಹಿಂದೆ ಹೋಗ್ತಿದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ತಮ್ಮ ಮೊಬೈಲ್ನಲ್ಲಿ ಬಸ್ ಚಕ್ರ ಕಟ್ ಆಗಿರುವ ವಿಡಿಯೋವನ್ನು ಸೆರೆ ಹಿಡಿದ್ದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿಗೆ ಮೊದಲು ಎಂಎಲ್ಎ ಟಿಕೆಟ್ ಕೊಡಿಸಿದ್ದೇ ನಾನು; ವೀರಪ್ಪ ಮೊಯ್ಲಿ

ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್ 14ರಂದು ನಾಮಕರಣ

ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!

ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
