ಪ್ರವಾಸದ ಆಸೆಯಲ್ಲಿ ಕೆಂಪೇಗೌಡ ಏರ್​​ಪೋರ್ಟ್​​ಗೆ ಬಂದವರು ಅತಂತ್ರ, ಪ್ಲ್ಯಾನ್​​ಗಳೆಲ್ಲ ಉಲ್ಟಾ

Updated on: Dec 04, 2025 | 3:19 PM

ಕೆಂಪೇಗೌಡ ಏರ್ಪೋಟ್ ನಲ್ಲಿ ಇಂದು (ಡಿಸೆಂಬರ್ 04) ಸಹ ವಿಮಾನಗಳ‌ ಹಾರಾಟದಲ್ಲಿ ವ್ಯತ್ಯಯ ಮುಂದುವರೆದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇಂಡಿಗೋ ವಿಮಾನಗಳ ವ್ಯತ್ಯಯದಿಂದ 6 ದಿನದ ಟ್ರಿಪ್ 5 ದಿನಕ್ಕೆ ಮೊಟಕುಗೊಂಡಿದೆ. ಇದರಿಂದ ವಿದೇಶ ಪ್ರವಾಸಕ್ಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಅತಂತ್ರವಾಗಿದ್ದು, ಏನು ಮಾಡಬೇಕೆಂದು ದಿಕ್ಕುತೋಚದೇ ಪರದಾಡುತ್ತಿದ್ದಾರೆ.

ಬೆಂಗಳೂರು, (ಡಿಸೆಂಬರ್ 04): ಕೆಂಪೇಗೌಡ ಏರ್ಪೋಟ್ ನಲ್ಲಿ ಇಂದು (ಡಿಸೆಂಬರ್ 04) ಸಹ ವಿಮಾನಗಳ‌ ಹಾರಾಟದಲ್ಲಿ ವ್ಯತ್ಯಯ ಮುಂದುವರೆದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇಂಡಿಗೋ ವಿಮಾನಗಳ ವ್ಯತ್ಯಯದಿಂದ 6 ದಿನದ ಟ್ರಿಪ್ 5 ದಿನಕ್ಕೆ ಮೊಟಕುಗೊಂಡಿದೆ. ಇದರಿಂದ ವಿದೇಶ ಪ್ರವಾಸಕ್ಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಅತಂತ್ರವಾಗಿದ್ದು, ಏನು ಮಾಡಬೇಕೆಂದು ದಿಕ್ಕುತೋಚದೇ ಪರದಾಡುತ್ತಿದ್ದಾರೆ. ದೆಹಲಿಯಲ್ಲಿ ಇಂಡಿಗೋ ವಿಮಾನ 12 ಗಂಟೆ ವಿಳಂಬವಾಗಿದೆ. ಇದರಿಂದ ಬೆಂಗಳೂರಿನಿಂದ ಶ್ರೀಲಂಕಾಗೆ ತೆರಳುವ ಫ್ಲೈಟ್​ ಮಿಸ್ ಆಗಿದ್ದು. 100ಕ್ಕೂ ಹೆಚ್ಚು ಜನರು ಕಂಗಾಲಾಗಿದ್ದಾರೆ. ಇನ್ನು 6 ದಿನ ಪ್ರವಾಸದ ಪ್ಲ್ಯಾನ್​ ಮಾಡಿಕೊಂಡು ಜೈಪುರದಿಂದ ಬಂದಿದ್ದ ತಂಡ ಸಹ ಪ್ಲೈಟ್ ಮಿಸ್ ಆದ ಕಾರಣ ಬಸ್ ಮೂಲಕ ವಿವಿಧೆಡೆ ಪ್ರಯಾಣ ಬೆಳೆಸಿದೆ. ಇನ್ನು ಕೆಲ ಪ್ರಯಾಣಿಕರು ಏರ್​​ಪೋರ್ಟ್​​ನಲ್ಲಿ ಲಗೇಜ್ ಹಿಡಿದುಕೊಂಡು ಪರದಾಡುತ್ತಿದ್ದಾರೆ.