ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್​

Updated on: Feb 04, 2026 | 5:56 PM

ಪಟ್ನಾದ ದೀಘಾ ಘಾಟ್ ಬಳಿ ಗಂಗಾ ನದಿಯಲ್ಲಿ ಇಬ್ಬರು ಯುವಕರು ಮುಳುಗುತ್ತಿದ್ದಾಗ, ಮಹಿಳಾ ಟ್ರಾಫಿಕ್ ಪೊಲೀಸ್ ತಾರಾ ಕುಮಾರಿ ತಮ್ಮ ಪ್ರಾಣದ ಹಂಗು ತೊರೆದು ಸಮವಸ್ತ್ರದಲ್ಲೇ ನದಿಗೆ ಹಾರಿದರು. ಅವರ ಸಮಯಪ್ರಜ್ಞೆ ಮತ್ತು ಅಪ್ರತಿಮ ಧೈರ್ಯದಿಂದ ಯುವಕರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಈ ಸಾಹಸ ಕಾರ್ಯಕ್ಕೆ ಎಲ್ಲ ಕಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪಟ್ನಾದ ದೀಘಾ ಘಾಟ್ ಬಳಿ ಗಂಗಾ ನದಿಯಲ್ಲಿ ಇಬ್ಬರು ಯುವಕರು ಮುಳುಗುತ್ತಿದ್ದಾಗ ಮಹಿಳಾ ಟ್ರಾಫಿಕ್ ಪೊಲೀಸ್​​ ಧಾವಿಸಿ ಕಾಪಾಡಲು ಮುಂದಾಗಿದ್ದಾರೆ. ತಾರಾ ಕುಮಾರಿ ಎಂಬ ಪೊಲೀಸ್​​ ಅಧಿಕಾರಿಯ ಈ ಕೆಲಸಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಜನ ಹಿಂಜರಿಯುತ್ತಾರೆ, ಆದರೆ ತಾರಾ ಅವರು ತಾವು ಧರಿಸಿದ್ದ ಪೊಲೀಸ್ ಸಮವಸ್ತ್ರದಲ್ಲೇ ನದಿಗೆ ಹಾರಿ ಯುವಕರನ್ನು ರಕ್ಷಿಸಿದ್ದಾರೆ. ಅವರ ಈ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೋಡಿ ಅಲ್ಲಿದ್ದ ಜನರು ಬೆರಗಾದರು. ಪ್ರಾಣದ ಹಂಗು ತೊರೆದು ಅವರು ಮಾಡಿದ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 04, 2026 05:54 PM
Follow Us
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More